ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ನಕಲಿ ದಾಖಲೆ ಸೃಷ್ಟಿಸಿ ರೈತರ ಗೇಣಿ ಜಮೀನು ಕಬಳಿಸಲು ಸಂಚು ರೂಪಿಸಿದ್ದಾರೆ ಎಂದು ಭೀಮನಕಟ್ಟೆ ಮಠದ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಜಾಬ್ ಆಫರ್; ಪಿಯುಸಿ ವಿದ್ಯಾರ್ಹತೆ, ಆಕರ್ಷಕ ಸಂಬಳ

ಸೋಮವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಗೇಣಿಹಕ್ಕು ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿರುವ ಕಂದಾಯ ಇಲಾಖೆ ನೌಕರರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆಲಗೇರಿಯ ಸ.ನ.08ರಲ್ಲಿ ತೋಟ, ಸಾಗುವಳಿ ಜಾಗ ಕಬಳಿಸಲು ಸಂಚು ಹೂಡಿದ್ದಾರೆ. ಆದರೆ, ಗ್ರಾಮಸ್ಥರು ನಮ್ಮ ಪೂರ್ವಜರು ಇದ್ದ ಈ ಜಾಗ, ನಾವು ಜೀವನ ಕಟ್ಟಿಕೊಂಡ ಜಾಗ, ನಾವೇ ಮನೆ ಕಟ್ಟಿದ ಜಾಗವನ್ನು ಇಂದು ನಮ್ಮದಲ್ಲ ಎಂದರೆ ಹೇಗೆ. ಕಂದಾಯ ಇಲಾಖೆಯ ಒಳಗೆ ಇರುವ ಕೆಲವು ಭ್ರಷ್ಟ ನೌಕರರು ತಾಲೂಕಿನ ಭೀಮನಕಟ್ಟೆ ಮಠದೊಂದಿಗೆ ಶಾಮೀಲಾಗಿ ಮಠದ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಆರ್ಟಿಸಿ ದಾಖಲೆಗಳಲ್ಲಿ ನಮೂದಿಸಿದ್ದನ್ನು ಬಹಳ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಈ ಯೋಜನೆಯಲ್ಲಿ ಶೇ. 60% ರಷ್ಟು ಸಹಾಯಧನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ
ಮನವಿ ಸಲ್ಲಿಕೆ ಪತ್ರದಲ್ಲಿ ಹಲವರ ಹೆಸರು ಉಲ್ಲೇಖ:
ಮುಖ್ಯಮಂತ್ರಿಗಳು, ಕಂದಾಯ ಸಚಿವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಬರೆದಿರುವ ದೂರಿನ ಪತ್ರದಲ್ಲಿ ಮಠದ ಸ್ವಾಮೀಜಿಗಳು, ಮಠದ ಏಜೆಂಟ್ ಸಾಗರ ಭಟ್ಟ, ಕಂದಾಯ ಇಲಾಖೆ ನೌಕರ ಸುನೀಲ್ ಮತ್ತು ಮೋಜಣಿ ಇಲಾಖೆಯ ವಿಜಯಲಕ್ಷ್ಮಿ ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: SBI ಯಲ್ಲಿ ಜಾಬ್ ಆಫರ್; 17,900 ಸಂಬಳ, ವಿದ್ಯಾರ್ಹತೆ, ಅರ್ಜಿ ಲಿಂಕ್ ಇಲ್ಲಿದೆ












