
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು ನಿನ್ನೆ ಮತ್ತೆ ಗುಡ್ಡ ಕುಸಿದಿದೆ. ಸತತ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚಾರ್ಮಾಡಿ ಘಾಟ್ ನಲ್ಲಿ ಮಣ್ಣುಕುಸಿತ, ಬಂಡೆ-ಕಲ್ಲುಗಳು ರಸ್ತೆಗೆ ಉರುಳಿವೆ. ಗಾಳಿ ಮಳೆಗೆ ಮರಗಳು ರಸ್ತೆಗೆ ಬಿದ್ದಿವೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ

ಚಾರ್ಮಾಡಿ ಘಾಟ್ ನಲ್ಲಿ ಇನ್ನೂ ಸತತವಾಗಿ ಮಳೆ ಸುರಿದ್ರೆ ಭಾರಿ ಪ್ರಮಾಣದ ಹಾನಿಯಾಗಲಿದೆ. ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ.


ಇದನ್ನೂ ಓದಿ; ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಬೆಳೆ ಪರಿಹಾರ ಜಮಾ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ
ಮಾಳಿಗನಾಡು: ಸಿಡಿಲು ಬಡಿದು ಮನೆಗೆ ಹಾನಿ:
ಬಣಕಲ್, ಕೊಟ್ಟಿಗೆಹಾರ, ಬಾಳೂರು, ಚಾರ್ಮಾಡಿ ಘಾಟ್ ಸುತ್ತ ಬುಧವಾರವೂ ಮಳೆ ಸುರಿಯುತ್ತಿದೆ. ಜೊತೆಗೆ ಗಾಳಿಯೂ ಬಿರುಸಾಗಿದ್ದು, ರಾತ್ರಿ ವೇಳೆ ಮಳೆ ಹೆಚ್ಚಾಗುತ್ತಿದೆ.
ಇದನ್ನೂ ಓದಿ; 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಯಾವ ರೈತರ ಎಷ್ಟು ಸಾಲಮನ್ನಾ ಆಗಿದೆ, ಹೀಗೆ ಚೆಕ್ ಮಾಡಿ
ಬಾಳೂರು ಹೋಬಳಿಯ ಮಾಳಿಗನಾಡು ಗ್ರಾಮದ ಸೀತು ಡೀಕಯ್ಯ ಅವರ ಮನೆಗೆ ಸಂಜೆ ಸಿಡಿಲು ಬಡಿದು ಮನೆ ಜಖಂಗೊಂಡಿದೆ. ಮನೆಯವರು ಕೂಲಿ ಕೆಲಸಕ್ಕೆ ತೆರಳಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. (ವರದಿ- ತನು ಕೊಟ್ಟಿಗೆಹಾರ)














