ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರಿನ ಕರ್ಕೇಶ್ವರ ಕೈಮರ ಗ್ರಾಮ ಪಂಚಾಯಿತಿಯಲ್ಲಿ ಕಾಂಟ್ರಾಕ್ಟ್ ಬೇಸಿಕ್ ಅಡಿಯಲ್ಲಿ ಕಾರ್ಯನಿರತ ದಲಿತ ಸಿಬ್ಬಂದಿಯ ಮೇಲೆ ಪಂಚಾಯಿತಿಯ ಅಧ್ಯಕ್ಷ ಹಾಗೂ PDO ದಮ್ಕಿ ಹಾಕಿ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಜಾಬ್ ಆಫರ್; ಪಿಯುಸಿ ವಿದ್ಯಾರ್ಹತೆ, ಆಕರ್ಷಕ ಸಂಬಳ

ಏನಿದು ಆರೋಪ:
ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ Pdo ನರೇಗಾ & ಇತರೆ ಯೋಜನೆ ಅಡಿಯಲ್ಲಿ ಹಲವು ಕಾಮಗಾರಿಗಳನ್ನು ಪಂಚಾಯಿತಿಯ ಉಳಿದ ಸದಸ್ಯರನ್ನು ಲೆಕ್ಕಿಸದೆ ಬಡ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ನೀಡದೆ ಸ್ವಂತ ತೀರ್ಮಾನ ತೆಗೆದುಕೊಂಡು ಇಷ್ಟ ಬಂದವರಿಗೆ ಕಾಮಗಾರಿ ಇ ಸ್ವತ್ತು & ಸರ್ಕಾರದ ಸೌಲಭ್ಯ ನೀಡುತ್ತಿದ್ದಾರೆ ಎನ್ನಲಾಗಿದೆ.
ಅಲ್ಲದೆ ನರೇಗಾ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ವಂತ ಜೆಸಿಬಿ, ಟ್ರ್ಯಾಕ್ಟರ್ ಮೂಲಕ ಪಂಚಾತಿಯ ಎಲ್ಲ ಕಾಮಗಾರಿಯನ್ನು ತಾವೇ ಮಾಡಿಕೊಂಡು ಬಂದಿದ್ದು, ಸರ್ಕಾರದ ಹಣ ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಈ ಯೋಜನೆಯಲ್ಲಿ ಶೇ. 60% ರಷ್ಟು ಸಹಾಯಧನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ
ಈ ವಿಚಾರವಾಗಿ ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಊರಿನ ಸದಸ್ಯರು ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಸರ್ಕಾರದ ಹಣ ದುರ್ಬಳಕೆ, ಲಂಚ ಪಡೆದು ಇ ಸ್ವತ್ತು ನೀಡುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಸಾರ್ವಜನಿಕರು ಪತ್ರಕರ್ತರಿಗೆ ದೂರನ್ನು ನೀಡಿದಕ್ಕೆ ಅನುಮಾನಗೊಂಡು ಅಧ್ಯಕ್ಷ ಹಾಗೂ ಪಿಡಿಒ ಸೋಮವಾರ (06.01.2025) ಪಂಚಾಯಿತಿಗೆ ದಲಿತ ಸಿಬ್ಬಂದಿಯನ್ನು ಕರೆಸಿ ದಮ್ಮಿ ಹಾಕಿದ್ದಾರೆ. ಇದರಿಂದ ಹೆದರಿದ ಸಿಬ್ಬಂದಿಗಳು ದೂರು ನೀಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: SBI ಯಲ್ಲಿ ಜಾಬ್ ಆಫರ್; 17,900 ಸಂಬಳ, ವಿದ್ಯಾರ್ಹತೆ, ಅರ್ಜಿ ಲಿಂಕ್ ಇಲ್ಲಿದೆ
ಈ ಎಲ್ಲಾ ಅಕ್ರಮಗಳನ್ನು ಎಸೆದಿರುವ ಗ್ರಾ.ಪಂ ಅಧ್ಯಕ್ಷ ಹಾಗೂ ಪಿಡಿಒ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಮೂಲಕ ನೊಂದವರಿಗೆ ನ್ಯಾಯ ಒದಗಿಸಿಕೊಂಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.












