ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗೊಲ್ಲರಹಟ್ಟಿ ನಿವಾಸಿಗಳಿಂದ ಹಲ್ಲೆಗೊಳಗಾಗಿದ್ದ ದಲಿತ ಯುವಕ, ಇದೀಗ ದೇವಾಲಯದ ಬೀಗ ಒಡೆದು ಒಳಗೆ ಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ; ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ಜಾರಿ; ಈ ಕೆಲಸ ಮಾಡದಿದ್ರೆ ನಿಮಗೆ ಸಿಗಲ್ಲ ಗೃಹಲಕ್ಷ್ಮೀ 5 ನೇ ಕಂತಿನ ಹಣ

ಗೊಲ್ಲರಹಟ್ಟಿ ಗ್ರಾಮಸ್ಥರ ವಿರೋಧದ ನಡುವೆಯೂ ತಹಸೀಲ್ದಾರ್ ರಾಜೀವ್ ನೇತೃತ್ವದಲ್ಲಿ ನೂರಾರು ದಲಿತರು, ರಂಗನಾಥ ಸ್ವಾಮಿ ದೇವಾಲಯ ಪ್ರವೇಶಿಸಿದರು. ನಂತರ ಹಲ್ಲೆಗೊಳಗಾಗಿದ್ದ ಯುವಕ ಸೇರಿ ದಲಿತ ಯುವಕರು ಗರ್ಭಗುಡಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ; ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ; 140 ಇತರೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆರಂಭಿಕ ವೇತನ ರೂ.44,490
ಏನಿದು ಪ್ರಕರಣ:
ಜನವರಿ 1 ರಂದು ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಗೆ ಜೆಸಿಬಿ ಕೆಲಸಕ್ಕೆಂದು ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ದಲಿತ ವ್ಯಕ್ತಿ ಆಗಮನದಿಂದ ದೇವರಿಗೆ ಮೈಲಿಗೆಯಾಗಿದೆ ಎಂದು ಗ್ರಾಮಸ್ಥರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ದೇವರಿಗೆ ಮೈಲಿಗೆ ಆಗಿದೆ ಎಂದು ದಲಿತ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ಆದರೆ, ಅದೇ ಯುವಕ ಈಗ ದೇವರಿಗೆ ಪೂಜೆ ಮಾಡಿದ್ದಾನೆ. ಗ್ರಾಮಸ್ಥರು ಬೀಗದ ಕೈ ನೀಡದ ಹಿನ್ನೆಲೆಯಲ್ಲಿ ದ್ವಾರ ಬಾಗಿಲು, ಗರ್ಭಗುಡಿ ಬೀಗ ಒಡೆದು ದಲಿತ ಮುಖಂಡರು ದೇವರ ದರ್ಶನ ಪಡೆದರು. ಪೂಜೆ ಬಳಿಕ ಗರ್ಭಗುಡಿ, ದ್ವಾರಬಾಗಿಲನ್ನು ಅಧಿಕಾರಿಗಳು ಮುಚ್ಚಿಸಿದರು. ಇದೇ ವೇಳೆ ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ, ಮತ್ತೊಮ್ಮೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಗ್ರಾಮಸ್ಥರಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪೂಜೆ ಮಾಡಿದ್ದು ಸಂತೋಷ ತಂದಿದೆ:
30-40 ಜನ ನನಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಅವರನ್ನ ನಾನು ದ್ವೇಷ ಮಾಡಲ್ಲ, ಪ್ರೀತಿಸ್ತೇನೆ. ನನಗೆ ದಲಿತ ಎಂದು ಹೊಡೆದಿದ್ದರು, ನೋವು ಮಾಡಿದ್ದರು. ಇಂದು ನಾನು ಅದೇ ದೇಗುಲದ ಪೂಜೆ ಮಾಡಿದ್ದು ಸಂತೋಷ ತಂದಿದೆ. ಇವತ್ತು ನನಗೆ ನೆಮ್ಮದಿ ಆಗಿದೆ. ಭಗವಂತ ಅವರಿಗೆ, ನಮಗೆ ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಹಲ್ಲೆಗೊಳಗಾಗಿದ್ದ ಯುವಕ ಮಾರುತಿ ಪೂಜೆ ಬಳಿಕ ಹೇಳಿದ್ದಾರೆ.
ಜಯಪುರ: ಶ್ರೀ ಸದ್ಗುರು ವಿದ್ಯಾ ಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಯೂಟ್ಯೂಬರ್ ಅರೆಸ್ಟ್
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಬಸರೀಕಟ್ಟೆಯ ಶ್ರೀ ಸದ್ಗುರು ವಿದ್ಯಾ ಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಯೂಟ್ಯೂಬರ್ ನನ್ನು ಗ್ರಾಮಸ್ಥರೇ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ಭಾನುವಾರ ನಡೆದಿದೆ.
ಇದನ್ನೂ ಓದಿ; ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಹೇಗೆ?, ಕೊನೆಯ ದಿನಾಂಕ ಯಾವಾಗ?
ಶನಿವಾರ ಶ್ರೀ ಸದ್ಗುರು ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಶ್ರೀ ಸದ್ಗುರು ವಿದ್ಯಾ ಮಂದಿರದ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಕಾರ್ಯಕ್ರಮದ ವೀಡಿಯೋ ರೆಕಾರ್ಡ್ ಮಾಡಲು ಬಂದಿದ್ದ ಬೆಳ್ತಂಗಡಿ ಮೂಲದ ಯೂಟ್ಯೂಬರ್ ಶರತ್ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಮಾಡಿ, ಶಾಲೆಯಲ್ಲಿ ಉಳಿದುಕೊಂಡಿದ್ದ.
ಇದನ್ನೂ ಓದಿ; ರೈತರೇ ಗಮನಿಸಿ: ಬರ ಪರಿಹಾರ ಪಡೆಯಲು ಜಸ್ಟ್ ಈ ಕೆಲಸ ಮಾಡಿ
ಶನಿವಾರ ಮದ್ಯ ರಾತ್ರಿ ಶಾಲೆಯ ರೂಮಿನ ಬೀಗ ಮುರಿದು ಒಳ ಪ್ರವೇಶಿಸಿ, ಬೀರುವಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆಗ ಉಂಟಾದ ಶಬ್ಧ ಆಲಿಸಿದ ಹತ್ತಿರದ ಮನೆಯಲ್ಲಿ ವಾಸವಿದ್ದ ಸಿಬ್ಬಂದಿ ರಾಕೇಶ್ ಹಾಗೂ ಅವರ ಪತ್ನಿ ಭವ್ಯ ಆರೋಪಿಯನ್ನು ಹಿಡಿದು, ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ; ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ; ಮುಜರಾಯಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲು ಸೂಚನೆ
ಘಟನೆ ಮಾಹಿತಿ ಪಡೆದ ಜಯಪುರ ಪಿಎಸೈ ಅಂಬರೀಶ್ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.












