ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ಕೊಡಗಿನ ಅತ್ಯಂತ ಎತ್ತರದ ತಡಿಯಂಡಮೋಳ್ ಪರ್ವತಕ್ಕೆ ಚಾರಣ ತೆರಳಿದ ಕೇರಳ ಮೂಲದ ಕೋಯಿಕ್ಕೋಡ್‌ನ ಶರಣ್ಯಾ (36) ಎಂಬ ಯುವತಿ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!

ಯುವತಿ ತಡಿಯಂಡಮೋಳ್ ಪರ್ವತದ ತಪ್ಪಲಿನ ಯವಕಪಾಡಿ ಗ್ರಾಮದ ಹೋಂ ಸ್ಟೇ ಒಂದರಲ್ಲಿ ವಾಸ್ತವ್ಯ ಹೂಡಿ, ಗುರುವಾರ ಚಾರಣಕ್ಕೆ ಹೊರಟ ಅವರು ಒಬ್ಬಂಟಿಯಾಗಿದ್ದ ಹಿನ್ನೆಲೆಯಲ್ಲಿ, ಇತರ ಚಾರಣಿಗರ ಜೊತೆಗೆ ಕಳುಹಿಸಲಾಗಿತ್ತು ಎನ್ನಲಾಗಿದೆ. ಜೊತೆಗೆ ತೆರಳಿದವರು ಮರಳಿ ಬಂದಿದ್ದರಾದರೂ ಶರಣ್ಯಾ ಮಾತ್ರ ಹಿಂದಿರುಗಿರಲಿಲ್ಲ.

ದಾರಿ ತಪ್ಪಿರುವುದಾಗಿ ಆಕೆ ಗುರುವಾರ ಸಂಜೆ ತಾನು ತಂಗಿದ್ದ ಹೋಂ ಸ್ಟೇ ಮಾಲಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಮೊಬೈಲ್ ನಾಟ್ ರೀಚಬಲ್ ಆಗಿದೆ. ಈ ಪ್ರದೇಶದಲ್ಲಿ ಕಾಡಾನೆ ಕಾಟ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್!
ಗುರುವಾರ ರಾತ್ರಿ 3 ಗಂಟೆಯವರೆಗೆ ಶೋಧ ಮಾಡಲಾಗಿದ್ದು, ಸುಳಿವು ಲಭಿಸಿಲ್ಲ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ 4 ತಂಡಗಳು ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿವೆ. ತಡಿಯಂಡಮೋಳ್ ಪರ್ವತದಲ್ಲಿ ದಟ್ಟ ಮಳೆ ಮೋಡ ಕವಿದಿರುವುದು ಅಡಚಣೆ ಉಂಟುಮಾಡಿದೆ. ಆದರೆ ಸ್ಥಳೀಯರ ಪ್ರಕಾರ ಚಾರಣದ ದಾರಿ ದುರ್ಗಮವೇನೂ ಅಲ್ಲದ್ದರಿಂದ ದಾರಿ ತಪ್ಪುವ ಸಾಧ್ಯತೆ ಕಡಿಮೆ. ಶೋಧ ಕಾರ್ಯಕ್ಕೆ ಯವಕಪಾಡಿ ಗ್ರಾಮಸ್ಥರು, ಯುವಕರ ತಂಡ ಸಾಥ್ ನೀಡಿದ್ದಾರೆ.
















