ಚಿಕ್ಕಮಗಳೂರು: ಹಳೆ ಬೈಕ್ ಬಿಟ್ಟು ಹೊಸ ಬೈಕ್‌ ಎಗರಿಸಿದ ಖದೀಮ

ಚಿಕ್ಕಮಗಳೂರು:  (ನ್ಯೂಸ್ ಮಲ್ನಾಡ್ ವರದಿ) ಸಿನಿಮೀಯ ರೀತಿಯಲ್ಲಿ ಬೈಕ್ ಕಳ್ಳತನವೊಂದು ನಡೆದಿರುವ ಘಟನೆ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿದೆ.


ನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!


ಖಾಸಗಿ ಕಂಪನಿಯ ಉದ್ಯೋಗಿಯಾದ ಇಸ್ಮಾಯಿಲ್ ಕೆಲಸ ಮುಗಿಸಿ ಕಂಪನಿ ನೀಡಿದ್ದ ಬೈಕನ್ನು ರಾತ್ರಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದರು. ತಡರಾತ್ರಿ ಬಂದ ಖದೀಮರು ಬಹಳ ಚಾಲಾಕಿತನದಿಂದ ಇಸ್ಮಾಯಿಲ್ ಅವರ ಬೈಕನ್ನು ಕದ್ದೊಯ್ದಿದ್ದಾರೆ. ಕಳ್ಳರು ತಾವು ಬಂದಿದ್ದ ಹಳೆಯ ಬೈಕನ್ನು ಇಸ್ಮಾಯಿಲ್ ಮನೆಯ ಮುಂದೆಯೇ ಬಿಟ್ಟು, ಬದಲಿಗೆ ಇವರ ಬೈಕನ್ನು ಹೊತ್ತೊಯ್ದು ‘ಎಕ್ಸ್‌ಚೇಂಜ್’ ಮಾಡಿಕೊಂಡಿದ್ದಾರೆ.

ಈ ಕಳ್ಳತನದ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್‌!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.