ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣ ಸಂಬಂಧ ಭದ್ರಾವತಿಯ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮೂವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ!; ಈ ದಾಖಲೆ ಕಡ್ಡಾಯ

ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಜ್ಯೋತಿ ಅವರು ಈಚೆಗೆ ಭದ್ರಾ ನದಿಯಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿದ್ದರು. ಆಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಅಣ್ಣ ಮಾತನಾಡುತ್ತಾರೆ ಎಂದು ಮೊಬೈಲ್ ಕೊಟ್ಟಿದ್ದ. ಮೊಬೈಲ್ ಕರೆಯಲ್ಲಿದ್ದ ವ್ಯಕ್ತಿ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿದ್ದ. ಅನಂತರ ಮೈಮೇಲೆ ಲಾರಿ ಹತ್ತಿಸುವ ಬೆದರಿಕೆ ಹಾಕಿದ್ದ. ಈ ಕುರಿತು ವೀಡಿಯೋ ವೈರಲ್ ಆಗಿತ್ತು. ಒಟ್ಟಾರೆ ಘಟನೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!
ವೀಡಿಯೋದಲ್ಲಿನ ವ್ಯಕ್ತಿಗಳ ಆಧಾರದ ಮೇಲೆ ಹಳೇನಗರ ಠಾಣೆ ಪೊಲೀಸರು ಚನ್ನಗಿರಿ ಮಾವಿನಕಟ್ಟೆಯ ರವಿ (30), ಹಾಸನದ ಅರಕಲಗೂಡಿನ ವರುಣ್ (34), ಭದ್ರಾವತಿಯ ಸುರೇಂದ್ರ ಗೌಡ ಕ್ಯಾಂಪ್ನ ಅಜಯ್ (28) ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಸರ್ಕಾರದಿಂದ ಗ್ರಾಮ ಪಂಚಾಯತ್ಗಳಿಗೆ ಹೊಸ ನಿಯಮ ಜಾರಿ; ಏನದು ನಿಯಮ?
ಎಫ್ಐಆರ್ ನಲ್ಲಿ ಶಾಸಕ ಪುತ್ರನ ಹೆಸರು ಮಿಸ್?!:
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಳೇನಗರ ಠಾಣೆಯಲ್ಲಿ ಬಿಎನ್ಎಸ್ 132, 352, 351/2, 189/2,190 BNS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಚ್ಚರಿ ಅಂದರೆ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಬಸವೇಶ್ ಹೆಸರು ಎಫ್.ಐ.ಆರ್ ನಲ್ಲೇ ಇಲ್ಲ.
ಶಾಸಕರ ಪುತ್ರ ಬಸವೇಶನ ಹೆಸರಿಲ್ಲದೆ ಕೇವಲ 6-7 ಜನರ ವಿರುದ್ಧ ದೂರು ದಾಖಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.












