
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಮಂಕಿ ಕ್ಯಾಪ್ ಹಾಕಿ ದೇವಾಲಯದ ಹುಂಡಿ ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ!; ಈ ದಾಖಲೆ ಕಡ್ಡಾಯ

ಕಡೂರು ತಾಲೂಕಿನ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳವಾಲು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಹೊರಾಂಗಣದಲ್ಲಿ ಇಟ್ಟ ಹುಂಡಿ ಕದ್ದು ಪರಾರಿಯಾಗಿದ್ದಾರೆ. ಅಲ್ಲದೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಸುರಪುರ ಗ್ರಾಮದ ಈಶ್ವರ್ ದೇವಾಲಯ, ಎಂ ಕೋಡಿಹಳ್ಳಿ ಗ್ರಾಮದ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಸದ್ಯ ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!
ಯಗಟಿ ಹಾಗೂ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸರ್ಕಾರದಿಂದ ಗ್ರಾಮ ಪಂಚಾಯತ್‌ಗಳಿಗೆ ಹೊಸ ನಿಯಮ ಜಾರಿ; ಏನದು ನಿಯಮ?













