ಜಯಪುರ: ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ 66ನೇ ವಾರ್ಷಿಕ ಸಂಭ್ರಮಾಚರಣೆ ಕಾರ್ಯಕ್ರಮ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) 1958ರಲ್ಲಿ ಆರಂಭವಾದ ಶೃಂಗೇರಿ ಶಾರದ ಬ್ಯಾಂಕ್, 1960 ರಲ್ಲಿ ಕರ್ನಾಟಕ ಬ್ಯಾಂಕ್ ಆಗಿ ನಾಮಕರಣಗೊಂಡು 66ವರ್ಷಗಳ ಸುಧೀರ್ಘ ಸೇವೆ ನೀಡಿದ್ದು, ಗ್ರಾಹಕರ ಸಹಕಾರದಿಂದ ಲಕ್ಷಾಂತರ ಗ್ರಾಹಕರಿಗೆ ಸೇವೆ ನೀಡುತ್ತಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಸಂಜೀವ ಕುಮಾರ್ ಹೇಳಿದರು.


ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!


ಜಯಪುರದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ನಡೆದ 66ನೇ ವಾರ್ಷಿಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರಿಗೆ ತ್ವರಿತವಾಗಿ ಮತ್ತು ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಪರಿಣಾಮ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದೆ ಎಂದರು.

ಜಯಪುರ ಶಾಖೆಯ ವ್ಯವಸ್ಥಾಪಕ ಪ್ರಶಾಂತ್ ಮಾತನಾಡಿ, ಜಯಪುರ ಶಾಖೆಯಲ್ಲಿ ವಾರ್ಷಿಕ ಸುಮಾರು 167 ಕೋಟಿ ವ್ಯವಹಾರ ನಡೆಸಲಾಗಿದ್ದು, 118ಕೋಟಿ ಠೇವಣಿ ಸಂಗ್ರಹಿಸಿ 12ಕೋಟಿ ಸಾಲ ನೀಡಲಾಗಿದೆ. ಠೇವಣಿಗಳಿಗೆ 7.05 ಶೇಕಡ ಬಡ್ಡಿ ನೀಡಲಾಗುತ್ತಿದ್ದು, ಚಿನ್ನಾಭರಣ ಅಡಮಾನ ಸಾಲಕ್ಕೆ 9.34 ಬಡ್ಡಿಯಲ್ಲಿ ಸಾಲ ನೀಡಲಾಗುವುದು ಎಂದರು.


ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್‌!


ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ವೃತ್ತ ವ್ಯವಸ್ಥಾಪಕ ಸುಜಿತ್ ಕುಮಾರ್, ಜಯಪುರ ಕರ್ನಾಟಕ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಚೇತನ್, ಸಿಬ್ಬಂದಿಗಳಾದ ಕಾವ್ಯ, ಹರಿಹರಪುರ ಶಾಖೆಯ ಭಾಸ್ಕರ್ ನರಸಿಂಹ, ಬ್ಯಾಂಕಿನ ಗ್ರಾಹಕರಾದ ಜಯವಂತ ಭಟ್, ಕೌಳಿ ಶ್ರೀನಿವಾಸ್ ಗೌಡ ಮತ್ತಿತ್ತರಿದ್ದರು. (ವರದಿ: ಶಶಿ ಬೆತ್ತದಕೊಳಲು)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.