ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನಲ್ಲಿ ಮನೆ ಕಳ್ಳತನ ಪ್ರಕರಣ ಹೆಚ್ಚಾಗಿದ್ದು, ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ಜನರಲ್ಲಿ ಆತಂಕ ಸಷ್ಟಿಸಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ ಕುರಿತು ಆಹಾರ ಇಲಾಖೆಯಿಂದ ಬಿಗ್ ಅಪ್ಡೇಟ್; ಪಡಿತರ ಚೀಟಿ ಹೊಂದಿರುವವರು ಓದಲೇ ಬೇಕಾದ ಸುದ್ದಿ ಇಲ್ಲಿದೆ ನೋಡಿ

ಇದೀಗ ಚಿಕ್ಕಮಗಳೂರು ನಗರದ ರಾಮನಹಳ್ಳಿ ಬಡಾವಣೆಯ ಕೋಮಲ ಎಂಬುವವರ ಮನೆಯಲ್ಲಿ 25 ಗ್ರಾಂ ಚಿನ್ನ, 15 ಸಾವಿರ ನಗದು ಕದ್ದು ಎಸ್ಕೇಪ್ ಆಗಿದ್ದಾರೆ. ಮಧ್ಯರಾತ್ರಿ ಬಾಗಿಲು ಮುರಿದು ಕಳ್ಳತನ ಮಾಡಿದ್ದು, ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಬಿಯರ್ ದರ ಮತ್ತೆ ಹೆಚ್ಚಳ; ಬೆಲೆ ಎಷ್ಟಾಗಿದೆ ನೋಡಿ!
ಹೆಚ್ಚುತ್ತಿರುವ ಕಳ್ಳತನ ಪ್ರಕರಣ:
ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದ್ದು, ಕಳೆದ 5 ದಿನದಲ್ಲಿ ಎರಡು ಮನೆಗಳ ಕಳ್ಳತನ ನಡೆಸಿದ್ದಾರೆ. ಕಳೆದ ಶನಿವಾರ ಹಿರೇಮಗಳೂರು ಗ್ರಾಮದಲ್ಲಿ ಮನೆ ಕಳ್ಳತನ ನಡೆದಿತ್ತು.
ಇದನ್ನೂ ಓದಿ: ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಹೀಗೆ ಚೆಕ್ ಮಾಡಿ…












