ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮದಿನದ ಪ್ರಯುಕ್ತ ಸೂರ್ಯ ದೇವಸ್ಥಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಡ್ರಮ್ ಸೆಟ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೊಪ್ಪ ತಾಲೂಕು ಯುವ ಒಕ್ಕಲಿಗ ಸಂಘದ ವತಿಯಿಂದ ನೀಡಲಾಯಿತು.
ಇದನ್ನೂ ಓದಿ: ರೇಷನ್ ಕಾರ್ಡ್ ಕುರಿತು ಆಹಾರ ಇಲಾಖೆಯಿಂದ ಬಿಗ್ ಅಪ್ಡೇಟ್; ಪಡಿತರ ಚೀಟಿ ಹೊಂದಿರುವವರು ಓದಲೇ ಬೇಕಾದ ಸುದ್ದಿ ಇಲ್ಲಿದೆ ನೋಡಿ

ಸರ್ಕಾರಿ ಶಾಲೆಗಳ ಪುನಶ್ಚೇತನಗೊಳಿಸಿ ಅಭಿರುದ್ದಿಪಡಿಸಲು ಕೊಪ್ಪ ತಾಲೂಕು ಯುವ ಒಕ್ಕಲಿಗರ ಸಂಘದ 9ನೇ ಕಾರ್ಯಕ್ರಮ ಇದಾಗಿದ್ದು, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮದಿನದ ಪ್ರಯುಕ್ತ ನಿನ್ನೆ ಸೂರ್ಯ ದೇವಸ್ಥಾನದ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ನೀಡಲಾಯಿತು.
ಇದನ್ನೂ ಓದಿ: ರಾಜ್ಯದಲ್ಲಿ ಬಿಯರ್ ದರ ಮತ್ತೆ ಹೆಚ್ಚಳ; ಬೆಲೆ ಎಷ್ಟಾಗಿದೆ ನೋಡಿ!
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಯುವ ಒಕ್ಕಲಿಗರ ಸಂಘದ ಅಧ್ಯಕ್ಷರು ಆದ ಪೃಥ್ವಿರಾಜ್ ಕೌರಿ ಹಾಗೂ ಸಚಿನ್ ನಂದಿಗೋಡು, ಅವಿನಾಶ್ ನಿಲುವಾಗಿಲು, ಸುದರ್ಶನ್ ಗುಬ್ ಗದ್ದೆ, ಪ್ರಖ್ಯಾತ್ ಚಿಕ್ಕನ ಕೊಡುಗೆ, ಅದಿತಿ ಶಾನುವಳ್ಳಿ, ಪ್ರಶಾಂತ್ ಗೋಳಿಕೊಪ್ಪ, ಅನೂಪ್ ಬೆಳ್ಳಾಲೆ ಇದ್ದರು.
ಇದನ್ನೂ ಓದಿ: ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಹೀಗೆ ಚೆಕ್ ಮಾಡಿ…












