ಬೀರೂರು: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಸಾಗಿಸುತ್ತಿದ್ದ 130 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯ ರಹೀಂ ಸಾಬ್ ಲೇಔಟ್ ಬಳಿ ಬುಧವಾರ ನಡೆದಿದೆ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಕಡೂರು ತಾಲೂಕು ಆಹಾರ ನಿರೀಕ್ಷಕ ಎಚ್. ಶ್ರೀನಿವಾಸ್ ಅವರಿಗೆ ಕಡೂರು ಕಡೆಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ದೊರೆತಿತ್ತು. ತಕ್ಷಣ ತಹಸೀಲ್ದಾರ್ಗೆ ಮಾಹಿತಿ ನೀಡಿ ಬೀರೂರಿಗೆ ಬಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಿ. ವಿ. ತಿಪ್ಪೇಶ್ ಅವರ ನೆರವಿನಿಂದ ಕಾರ್ಯಾಚರಣೆ ನಡೆಸಿದರು. ಅಜ್ಜಂಪುರ ಕಡೆಯಿಂದ ಬರುತ್ತಿದ್ದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ 50 ಕೆಜಿಯ ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿ ತುಂಬಿಸಲಾಗಿತ್ತು. 260 ಚೀಲಗಳಿದ್ದವು. ಹೊನ್ನಾಳಿ ತಾಲೂಕಿನ ಚಾಲಕ ಚೇತನ್ ಎಂಬುವನನ್ನು ವಿಚಾರಣೆ ನಡೆಸಿದಾಗ ಆತನ ಬಳಿ ಅಕ್ಕಿ ಸಾಗಣೆಗೆ ಯಾವುದೇ ದಾಖಲೆ ಇರಲಿಲ್ಲ. ಆತನ ವಿರುದ್ಧ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಪಿಎಸ್ಐ ಡಿ. ವಿ. ತಿಪ್ಪೇಶ್, ಆಹಾರ ನಿರೀಕ್ಷಕರಾದ ಎಚ್. ಶ್ರೀನಿವಾಸ್, ಶಿಲ್ಪಾ, ಕಚೇರಿ ಸಿಬ್ಬಂದಿ ಜಗದೀಶ್ ಪೊಲೀಸ್ ಶಿವಾನಂದ, ಎಸ್. ಜಿ ಬಾಬು ಇದ್ದರು.












