ಬೀರೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಬೀರೂರು ಹೋಬಳಿ ಹೊಗರೇಹಳ್ಳಿ ಗ್ರಾಮದ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ, ಆತನಿಂದ 2.05 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹೊಗರೇಹಳ್ಳಿ ಗ್ರಾಮದ ಕುಮಾರ ಅಲಿಯಾಸ್ ಕುಮ್ಮಿ ಬಂಧಿತ ಆರೋಪಿ.
ಇದನ್ನೂ ಓದಿ; SC, ST ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಬಂಧಿತ ಆರೋಪಿಗಳಿಂದ 20 ಗ್ರಾಂ ತೂಕದ 2 ಚಿನ್ನದ ಉಂಗುರ, 6 ಗ್ರಾಂ ತೂಕದ ಚಿನ್ನದ ಹ್ಯಾಂಗಿಂಗ್ಸ್, 7 ಗ್ರಾಂ ಹಾಗೂ 4 ಗ್ರಾಂ ತೂಕದ ಚಿನ್ನದ ಜುಮುಕಿ ಓಲೆಗಳು ಮತ್ತು 4 ಗ್ರಾಂ ತೂಕದ ಚಿನ್ನದ ಮಾಟಿಯನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ; ಅನರ್ಹರ ಜಮೀನು ವಶಕ್ಕೆ ಕಂದಾಯ ಇಲಾಖೆ ಸಜ್ಜು; ಒಂದು ತಿಂಗಳೊಳಗೆ ಅರ್ಜಿ ತಿರಸ್ಕೃತ
ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಶ್ರೀಕಾಂತ್ ಎಸ್.ಎನ್, ಪಿಎಸ್ ಐ ಸಜಿತ್ ಕುಮಾರ್ ಜಿ.ಆರ್, ಹೆಡ್ ಕಾನ್ ಸ್ಟೇಬಲ್ ಗಳಾದ ಡಿ.ವಿ.ಹೇಮಂತ್ ಕುಮಾರ್, ಬಿ.ಪಿ,ಕೃಷ್ಣಮೂರ್ತಿ, ಶಿವಕುಮಾರ್ ಮತ್ತು ರಾಜಪ್ಪ ಪಾಲ್ಗೊಂಡಿದ್ದರು.
ಲಂಚ ಪಡೆಯುವಾಗ ಚಿಕ್ಕಮಗಳೂರು KSRTC DC ಲೋಕಾಯುಕ್ತ ಬಲೆಗೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) 10 ಸಾವಿರ ಲಂಚ ಸ್ವೀಕರರಿಸುವ ವೇಳೆ ಇಲ್ಲಿನ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಿಗೆ 10 ಸಾವಿರ ಲಂಚಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ಬೇಡಿಕೆ ಇಟ್ಟಿದ್ದ. ಹಣ ಸ್ವೀಕರಿಸುವ ವೇಳೆ ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ರಜೆ ನೀಡಲು, ಮಾರ್ಗಗಳ ಬದಲಾವಣೆ ಇತರೆ ವಿಷಯಗಳಲ್ಲಿ ಚಾಲಕರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ. ಅಲ್ಲದೆ, ಅಪಾರ ಪ್ರಮಾಣದಲ್ಲಿ ಲಂಚದ ಬೇಡಿಕೆ ಇಡುತ್ತಿದ್ದ ಆರೋಪ ಈತನ ಮೇಲಿತ್ತು. ದಲಿತ ನೌಕರರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪವಿದ್ದು ಈ ಬಗ್ಗೆ ಪ್ರತಿಭಟನೆ ನಡೆದು ವರ್ಗಾವಣೆಗೂ ಒತ್ತಾಯಿಸಲಾಗಿತ್ತು.












