ಬೀರೂರು: (ನ್ಯೂಸ್ ಮಲ್ನಾಡ್ ವರದಿ) ಎಪಿಎಂಸಿ ಆವರಣದಲ್ಲಿ ಶನಿವಾರ ಪೊಲೀಸ್ ಇಲಾಖೆ ದಾಳಿ ನಡೆಸಿ 3 ಸಾವಿರ ರೂ. ಮೌಲ್ಯದ 240 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆ

ಅಪರಿಚಿತ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿ ತರೀಕೆರೆ ತಾಲೂಕಿನ ಮುಂಡ್ರೆ ತಾಂಡ್ಯ ವಾಸಿ ಎಂ.ರಘು ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ 240 ಗ್ರಾಂ ಗಾಂಜಾ, ಸ್ಕೂಟರ್ ಹಾಗೂ 500 ರೂ. ಹಣ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಸಬ್ಇನ್ ಸ್ಪೆಕ್ಟರ್ ಡಿ.ವಿ.ತಿಪ್ಪೇಶ್, ಸಿಬ್ಬಂದಿ ಶಿವಾನಂದ್, ಓಂಕಾರಸ್ವಾಮಿ, ಯತೀಶ್, ಚಂದ್ರನಾಯ್ಕ, ಪುರಸಭೆ ನೌಕರರಾದ ಕರಿಯಪ್ಪ, ಲೋಕೇಶಪ್ಪ, ಮೋಹನ್ ಕುಮಾರ್ ಇತರರಿದ್ದರು.












