ಬೀರೂರು : (ನ್ಯೂಸ್ ಮಲ್ನಾಡ್ ವರದಿ) ಕ್ಯಾಂಟರ್ ಗಾಡಿ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ಲೂರು ಗೇಟ್ ಸಮೀಪ ನಡೆದಿದೆ. ಅಪಘಾತದ ರಭಸಕ್ಕೆ ಕ್ಯಾಂಟರ್ ಚಾಲಕ ಮೋಹನ್ (30), ಕ್ಲೀನರ್ ಮೊಹ್ಮದ್ ಆಸಿಫ್ (40) ಸ್ಥಳದಲ್ಲೇ ಸಾವನ್ನಪ್ಪಿರುವ ವ್ಯಕ್ತಿ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

ಬೀರೂರು ಠಾಣೆಯ ಪಿಎಸ್‌ಐ ತಿಪ್ಪೇಶ್ ನಾಯ್ಕ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು. ಗಾಯಾಳುಗಳನ್ನು ಕಡೂರು ಮತ್ತು ಬೀರೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ













