
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜ್ಞಾನಭಾರತಿ ವಿದ್ಯಾ ಕೇಂದ್ರವು ಶೇ.100 ಫಲಿತಾಂಶ ಸಾಧಿಸಿ ಗಮನಾರ್ಹ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 62 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು, ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಈ ಬಾರಿ 31 ವಿದ್ಯಾರ್ಥಿಗಳು A+ ಶ್ರೇಣಿಯಲ್ಲಿ, 24 ವಿದ್ಯಾರ್ಥಿಗಳು A ಶ್ರೇಣಿಯಲ್ಲಿ ಹಾಗೂ 7 ವಿದ್ಯಾರ್ಥಿಗಳು B+ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆ ಶಾಲೆಗೆ ಹೆಮ್ಮೆ ತಂದಿದೆ.

ವಿದ್ಯಾರ್ಥಿನಿ ಕುಮಾರಿ ನವಮಿ 615 ಅಂಕಗಳನ್ನು ಪಡೆದು ತಾಲೂಕಿಗೆ ದ್ವಿತೀಯ ಸ್ಥಾನವನ್ನು ಗಳಿಸಿ ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇತರ ಪ್ರಮುಖ ಸಾಧಕರಲ್ಲಿ ಧ್ರುವ ತೇಜ (612), ನಮಿತಾ (610), ಮನಸ್ವಿ (608), ನೇಸರ್ (608), ಶ್ರೀಕರ (606), ಶ್ರೇಯಸ್ (606), ಅಪೂರ್ವ (604), ಅಥರ್ವ ಧ್ಯಾನ್ (604), ಐಶ್ವರ್ಯ (603), ಅನಂತಮೂರ್ತಿ (603), ನಾರಾಯಣ (603), ಶ್ರೀಪ್ರಿಯ (603), ನಿಶಾ (601) ಹಾಗೂ ದಿಶಾ (599) ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಿದ್ದಾರೆ.















