2023-24ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೃಂಗೇರಿಯ ಜೆ. ಸಿ. ಬಿ. ಎಂ. ಕಾಲೇಜು 115 ಅತ್ಯುನ್ನತ ಶ್ರೇಣಿಯೊಂದಿಗೆ ಶೇ 100 ಫಲಿತಾಂಶ ಪಡೆದುಕೊಂಡಿದೆ.
ಮಾರ್ಚ್ 2024ರಲ್ಲಿ ನಡೆದ ದ್ವಿತೀಯ ಪಿ. ಯು. ಸಿ. ಪರೀಕ್ಷೆಯಲ್ಲಿ ಹಾಜರಾದ ಒಟ್ಟು 257 ವಿದ್ಯಾರ್ಥಿಗಳಲ್ಲಿ 257 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 100 ಫಲಿತಾಂಶ ಬಂದಿರುತ್ತದೆ ಎಂದು ಪದವಿ ಪೂರ್ವ ವಿಭಾಗದ ಸಂಯೋಜಕರಾದ ಪ್ರಶಾಂತ್ ತಿಳಿಸಿದ್ದಾರೆ.

115 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, 123 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ವಾಣಿಜ್ಯ ವಿಭಾಗದ ಕು. ಇಂಚರಾ ಕೆ.ಜಿ 587 (ಶೇ. 98) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ವಾಣಿಜ್ಯ ವಿಭಾಗದ ಕು. ಆಶಿಕಾ ಎ. ಎಲ್ 585 (ಶೇ 97.55) ಮತ್ತು ಮಧುಸೂಧನ್ ವಿ ಆರ್ 585 (ಶೇ 97.55) ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದು, ವಿಜ್ಞಾನ ವಿಭಾಗದ ಐಶ್ವರ್ಯ ಯು ಪೈ 581 (ಶೇ 97) ಮತ್ತು ವಿಧಾತ್ರಿ ಬಿ.ಯು 581 (ಶೇ 97) ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಎಂ ಸ್ವಾಮಿ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.













