ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪ್ರಕೃತಿ ಸೌಂದರ್ಯದಿಂದ ಹೆಸರು ವಾಸಿಯಾದ ಚಾರ್ಮಾಡಿ ಘಾಟ್ನಲ್ಲಿ ಅಪಘಾತ ಸಂಭವಿಸಿ, 21 ವರ್ಷದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

ಮೂತ್ರವಿಸರ್ಜನೆಗಾಗಿ ಪ್ರಪಾತದ ಅಂಚಿನತ್ತ ಹೋದಾಗ ಕಾಲು ಜಾರಿ ಸುಮಾರು 30 ಅಡಿ ಆಳಕ್ಕೆ ಬಿದ್ದಿದ್ದು, ಚಕ್ ಮಕ್ಕಿ ಗ್ರಾಮದ ನಿವಾಸಿ ಮುಸಮ್ಮಿಲ್ (21) ಗಾಯಗೊಂಡಿದ್ದಾನೆ. ತಕ್ಷಣ ಹೈವೇ ಪಟ್ರೊಲ್ ಸಹಾಯಕ್ಕೆ ಧಾವಿಸಿ ಅವನನ್ನು ಎತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಆಸ್ಪತ್ರೆಗೆ ರವಾನಿಸಿದರು.
ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ












