ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಬಾಳೆಹೊನ್ನೂರು, ನರಸಿಂಹರಾಜಪುರ, ಖಾಂಡ್ಯ, ಕೊಪ್ಪ, ಮೂಡಿಗೆರೆ ಭಾಗದ ಜನರು ಕಾಡಾನೆ ಹಾವಳಿಯಿಂದ ತತ್ತರಿಸಿ ಹೋಗಿದ್ದು, ಜೀವಭಯದಿಂದ ಕೃಷಿ ತೋಟಗಳಿಗೆ ಹೋಗುವ ಪರಿಸ್ಥಿತಿ ಉದ್ಭವಿಸಿತ್ತು.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

ಇದೀಗ ಕಾಡಾನೆಯೊಂದು ಶೃಂಗೇರಿಯ ಮಾರನಕೊಡಿಗೆ, ಮೌಳಿ, ಕುಂತೂರು, ಕಿಕ್ರೆ, ಶಿಡ್ಲೆ, ಕುಂಚೇಬೈಲು, ಹೊಸ ಕೊಪ್ಪ ಭಾಗದಲ್ಲಿ ಸಂಚರಿಸಿ ಗಜಪಯಣ ಮುಂದುವರೆಸಿದೆ, ಹಲವೆಡೆ ಕೃಷಿ ಮಾಡಿದ ಗದ್ದೆಯನ್ನು ತುಳಿದು ಬೆಳೆ ನಾಶ ಮಾಡಿದೆ.
ಅರಣ್ಯ ಇಲಾಖೆ ಹೈ ಅಲರ್ಟ್ ಆಗಿದ್ದು ಹಾನಿಯನ್ನು ತಡೆಗಟ್ಟಲು ಆನೆಯನ್ನು ಕಾಡಿಗೆ ಓಡಿಸಲು ಶತಪ್ರಯತ್ನ ಮಾಡುತ್ತಿದೆ.
ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ












