
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಾಡಹಗಲೇ ಚಿಕ್ಕಮಗಳೂರಿನಲ್ಲಿ ವೃದ್ಧೆಯ ಚಿನ್ನದ ಮಾಂಗ್ಯಲ ಸರ ಕಸಿದುಕೊಂಡು ಹೋಗಿರುವ ಘಟನೆ ಬುಧವಾರ ಬಸವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್: ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ಕಿಪೇಟೆಯ ವೃದ್ಧೆ ಬುಧವಾರ ಸಂಜೆ 5ಕ್ಕೆ ವಾಕಿಂಗ್ ಹೋಗಿದ್ದರು. ಚಂದ್ರನಗರದಿಂದ ಕೆಂಪನಹಳ್ಳಿ ಕಡೆ ರಸ್ತೆಯಲ್ಲಿ ವಾಕ್ ಮುಗಿಸಿ ಸಾಯಿಬಾಬ ಸಾಮಿಲ್ ಬಳಿ ಸೇತುವೆ ಮೇಲೆ ಕುಳಿತಿದ್ದಾಗ ಮುಖಕ್ಕೆ ಮಾಸ್ಕ್ ಧರಿಸಿದ ಇಬ್ಬರು ಸ್ಕೂಟಿಯಲ್ಲಿ ಬಂದು ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ.

ಚಿನ್ನದ ಸರದ ಮೌಲ್ಯ ಅಂದಾಜು 2,25,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವೃದ್ಧೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿ; ಡಿಟೇಲ್ಸ್‌ಗಾಗಿ ಜಸ್ಟ್ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ













