ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಯುವತಿಯೊಬ್ಬರು ಕಾರಿನಿಂದ ಇಳಿಯುತ್ತಿದ್ದಾಗ ಅವರ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೇ 22ರಂದು ಸಂಜೆ ಅಬ್ಬಲಗೆರೆಯ ಬಳಿ ಯುವತಿಯೊಬ್ಬರು ಕಾರಿನಿಂದ ಕೆಳಗೆ ಇಳಿಯುತ್ತಿದ್ದರು. ಈ ವೇಳೆ ಹಿಂದಿನಿಂದ ಮತ್ತೊಂದು ಕಾರಿನಲ್ಲಿ ಬಂದ ಕಳ್ಳರಿಬ್ಬರು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಇನ್ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಹಾಗೂ ಪಿಎಸ್ಐ ನವೀನ್ ಮಠಪತಿ ನೇತೃತ್ವದ ತಂಡ ಪ್ರಮುಖ ಆರೋಪಿ ಮಂಜುನಾಥ ನಾಯ್ಕ ಎಂಬಾತನನ್ನು ಬಂಧಿಸಿದೆ.

ಈತನಿಂದ ₹1,50,000 ಮೌಲ್ಯದ 10 ಗ್ರಾಂ ತೂಕದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ₹ 5 ಲಕ್ಷ ಮೌಲ್ಯದ ಇಕೋ ಸ್ಪೋರ್ಟ್ಸ್ ಕಾರು ವಶಪಡಿಸಿಕೊಂಡಿದ್ದಾರೆ.














