ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಾನೆಗಳು ದಿನನಿತ್ಯ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಯನ್ನ ಹಾನಿ ಮಾಡ್ತಿವೆ. ಕಾಡಾನೆಗಳ ಉಪಟಳಕ್ಕೆ ಮಲೆನಾಡಿನ ಜನ ತತ್ತರಿಸಿ ಹೋಗಿದ್ದು, ಕಾಡಾನೆಗಳನ್ನ ಸ್ಥಳಾಂತರಿಸುವಂತೆ ಅರಣ್ಯಾಧಿಕಾರಿ ಎಷ್ಟೇ ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗ್ತಿಲ್ಲ.ಕಷ್ಟಪಟ್ಟು ಬೆಳೆದ ಬೆಳೆಗಳು ಮಣ್ಣು ಪಾಲು ಆಗುತ್ತಿದೆ ಎಂದು ರೈತರು ಅರಣ್ಯಾಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.

ಬೆಳ್ಳಂ ಬೆಳಗ್ಗೆ ಗ್ರಾಮದಲ್ಲಿ ಒಂಟಿ ಸಲಗ ಸಂಚಾರ:
ಹೌದು, ಚಿಕ್ಕಮಗಳೂರು ತಾಲೂಕಿನ ಮಾಗೋಡು, ಗವಿಗದ್ದೆ ಗ್ರಾಮದಲ್ಲಿ ಬೆಳ್ಳಂ ಬೆಳಗ್ಗೆ ಗ್ರಾಮದಲ್ಲಿ ಒಂಟಿ ಸಲಗ ಸಂಚಾರ ಮಾಡಿದ್ದು, ಗ್ರಾಮದ ಜನರು ಕಂಗಲಾಗಿದ್ದಾರೆ.
ಇದನ್ನೂ ಓದಿ: ಅರಣ್ಯದಲ್ಲಿ ಶೂಟ್ ಮಾಡುವವರಿಗೆ ಸ್ಟ್ರಿಕ್ಟ್ ರೂಲ್ಸ್; ಸರ್ಕಾರದಿಂದ ಹೊಸ ಆದೇಶ
15 ದಿನಗಳ ಹಿಂದೆ ರೈತನ ಮೇಲೆ ದಾಳಿ:
ಕಳೆದ 15 ದಿನಗಳ ಹಿಂದೆ ಹುಕ್ಕುಂದ ಗ್ರಾಮದಲ್ಲಿ ರೈತರೊಬ್ಬರ ಮೇಲೆ ಕಾಡಾನೆ ದಾಳಿ ಕೂಡ ಮಾಡಿತ್ತು. ಕಾಡು ಪ್ರಾಣಿಗಳ ಕಾಟವಿರೋ ಕಡೆಯಲ್ಲಾ ಸಾರ್ವಜನಿಕರು ಆರೋಪ ಮಾಡ್ತಿರೋದು ಅರಣ್ಯ ಇಲಾಖೆ ಮೇಲೆಯೇ. ಅದ್ದರಿಂದ ಕೂಡಲೇ ಅರಣ್ಯ ಇಲಾಖೆ ತಮ್ಮಲ್ಲಿರೋ ಲೋಪ-ದೋಷಗಳನ್ನು ಸರಿಪಡಿಸಿಕೊಂಡು ಕಾಡು ಪ್ರಾಣಿಗಳ ಕಾಟಕ್ಕೆ ತುತ್ತಾಗಿರೋ ಜನರನ್ನ ರಕ್ಷಿಸಬೇಕಿದೆ.
ಇದನ್ನೂ ಓದಿ: BEL ನಿಂದ 350 ಹುದ್ದೆಗೆ ಅರ್ಜಿ ಆಹ್ವಾನ; ಆಕರ್ಷಕ ಸಂಬಳ












