
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಮಘೇಬೈಲು ಗ್ರಾಮದಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

ಆಡಿಕೆ ಸುಲಿಯುವ ಕೆಲಸಕ್ಕೆ ಬಂದಿದ್ದ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ಮಗನಿಗೆ, ದಾರಿಯ ಪಕ್ಕದಲ್ಲೇ ಬಿದುರು ತಿನ್ನುತ್ತಿದ್ದ ಕಾಡಾನೆ ಕಾಣಿಸಿಕೊಂಡಿದೆ. ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಯುವಕ ತಾಯಿಗೆ ಮಾಹಿತಿ ನೀಡಿ, ಇಬ್ಬರೂ ಸಮೀಪದಲ್ಲಿದ್ದ ತಮ್ಮ ಮನೆಗೆ ಓಡಿ ಸುರಕ್ಷಿತರಾಗಿದ್ದಾರೆ. ಬಳಿಕ ಈ ವಿಷಯವನ್ನು ಅಲ್ಲಿಗೆ ಕೆಲಸಕ್ಕೆ ಬಂದಿದ್ದ ಇತರರಿಗೆ ತಿಳಿಸಲಾಗಿದೆ.

ಸದ್ಯ ಕಾಡಾನೆ ಮಘೇಬೈಲಿನ ಗುಲಾಬಿ ಎಂಬುವರ ಮನೆಯ ಹಿಂದಿನ ತೋಟದಲ್ಲಿ ಇದ್ದು, ಬಾಳೆಗಿಡಗಳನ್ನು ತಿಂದು ಹಾನಿ ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಆಧಾರ್ ಸೇವಾ ಕೇಂದ್ರದಲ್ಲಿ ಜಾಬ್, ಅರ್ಜಿ ಆಹ್ವಾನ














