
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಯುಟ್ಯೂಬರ್ ಅಭಿಷೇಕ್ ಎನ್ನುವವನ ವಿರುದ್ಧ ತಾಲ್ಲೂಕಿನ ಪತ್ರಕರ್ತರ ಸಂಘಗಳು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದೆ.
ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

‘ಹಾಯ್ ಹಾಲೋ ನಮಸ್ಕಾರ ನಾನು ಅಭಿಷೇಕ್ ಶೃಂಗೇರಿ’ ಎನ್ನುತ್ತಾ ಕಂಡಕಂಡವರನ್ನು ಇಂಟರ್ವ್ಯೂ ಮಾಡುತ್ತಿದ್ದ ಈ ಅಭಿಷೇಕ್ ಮೂಲತಃ ಕೊಪ್ಪ ತಾಲ್ಲೂಕಿನ ಹರಿಹರಪುರ ಮೂಲದವನು. ಸಹ್ಯಾದ್ರಿ ಸಮಾಚಾರ ಎನ್ನುವ ಯೂಟ್ಯೂಬ್ ಚಾನೆಲ್ ಒಂದನ್ನು ಮಾಡಿಕೊಂಡು ಊರಲ್ಲಿರುವ ಸಿಕ್ಕಸಿಕ್ಕವರ ಇಂಟರ್ವ್ಯೂ ಮಾಡಿಕೊಂಡಿದ್ದ.. ಇದೀಗ ತನ್ನನ್ನು ತಾನು ಪತ್ರಕರ್ತನೆಂದು ಹೇಳಿಕೊಂಡು ಹಫ್ತಾ ವಸೂಲಿ ದಂಧೆಗೆ ಇಳಿದಿರುವ ಆರೋಪ ಈತನ ವಿರುದ್ಧ ಕೇಳಿಬಂದಿದೆ. ಕೊಪ್ಪ ತಾಲ್ಲೂಕಿನ ಹರಿಹರಪುರ ವ್ಯಾಪ್ತಿಯಲ್ಲಿ ಅಕ್ರಮವಾಗಿ ತುಂಗಾ ನದಿಯಿಂದ ಮರಳು ದಂಧೆ ನಡೆಯುತ್ತಿತ್ತು. ಈ ದಂಧೆಗೆ ಅಭಿಷೇಕ್ ತಿಂಗಳಿಗೆ 25 ಸಾವಿರ ಲಂಚ ಫಿಕ್ಸ್ ಮಾಡಿದ್ದ.. ಪತ್ರಿಕೆಗಳು ಹಾಗೂ ಮಾಧ್ಯಮದವರೊಂದಿಗೆ ನಾನು ಮ್ಯಾನೇಜ್ ಮಾಡುತ್ತೇನೆ ಎಂದು ಹೇಳಿದ್ದಲ್ಲದೆ ಒಂದು ತಿಂಗಳ ಹಣವನ್ನು ಮರಳು ದಂಧೆಕೋರರಿಂದ ಪಡೆದಿದ್ದಾನೆ ಎನ್ನಲಾಗಿದೆ.


ಇದನ್ನೂ ಓದಿ: ಆಧಾರ್ ಸೇವಾ ಕೇಂದ್ರದಲ್ಲಿ ಜಾಬ್, ಅರ್ಜಿ ಆಹ್ವಾನ
ಈ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಕೊಪ್ಪ ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಕೊಪ್ಪ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಯೂಟ್ಯೂಬರ್ ಅಭಿಷೇಕ್ ಕೇವಲ ಮರಳು ದಂಧೆಕೋರರಿಗೆ ಮಾತ್ರವಲ್ಲದೆ ತಾಲ್ಲೂಕಿನ ಹಲವು ಗುತ್ತಿಗೆದಾರರ ಬಳಿಯೂ ಹಣಕ್ಕೆ ಬೇಡಿಕೆ ಇಟ್ಟಿದ್ದು ರಾಜಕಾರಣಿಗಳಿಂದ ನಮ್ಮ ಗಮನಕ್ಕೆ ಬಂದಿದೆ. ಆತ ಅಧಿಕೃತವಾಗಿ ಯಾವುದೇ ಪತ್ರಕರ್ತರ ಸಂಘದ ಸದಸ್ಯನಲ್ಲ. ಜೊತೆಗೆ ಮಾಧ್ಯಮದವರ ಹೆಸರಲ್ಲಿ ಈ ರೀತಿ ಹಫ್ತಾ ವಸೂಲಿಯಲ್ಲಿ ತೊಡಗಿರುವ ಅಭಿಷೇಕ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ಎರಡೂ ಪತ್ರಕರ್ತರ ಸಂಘಗಳೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ಸಲ್ಲಿಸಿದೆ.
ಇದನ್ನೂ ಓದಿ: ಆಧಾರ್ ಅಪ್ಡೇಟ್’ಗೆ ಸುವರ್ಣವಕಾಶ
















