
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿನಾಂಕ 30-12-2025ರಂದು ಜ್ಞಾನಭಾರತಿ ವಿದ್ಯಾಕೇಂದ್ರದಲ್ಲಿ ಸರಳ ರಂಗೋಲಿ ಬಿಡಿಸುವ ಚಟುವಟಿಕೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ಹೆಣ್ಣು ಮಕ್ಕಳು ಮಾತ್ರವಲ್ಲದೆ ಗಂಡು ಮಕ್ಕಳು ಕೂಡ ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಪಾಲ್ಗೊಂಡಿದ್ದರು.
ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

ಶಾಲಾ ಶಿಕ್ಷಕಿ ಶ್ರೀಮತಿ ವಾಣಿಶ್ರೀ ಮಾತಾಜಿಯವರ ಮಾರ್ಗದರ್ಶನದಲ್ಲಿ ಮಕ್ಕಳು ವಿಭಿನ್ನ ವಿನ್ಯಾಸಗಳ ರಂಗೋಲಿಗಳನ್ನು ಬಿಡಿಸಿದ್ದು, ಶಾಲೆಯ ಅಂಗಳವೆಲ್ಲಾ ಬಣ್ಣಬಣ್ಣದ ರಂಗೋಲಿಗಳಿಂದ ಕಂಗೊಳಿಸಿತು. ಮಕ್ಕಳ ಕಲಾತ್ಮಕತೆ ಮತ್ತು ಸೃಜನಶೀಲತೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಈ ಚಟುವಟಿಕೆಯಿಂದ ಮಕ್ಕಳು ಗುಂಪುಗಳಲ್ಲಿ ಕೆಲಸ ಮಾಡುವ ಮೂಲಕ ಸಹಕಾರ, ಒಗ್ಗಟ್ಟು ಹಾಗೂ ತಂಡಭಾವನೆಯ ಮಹತ್ವವನ್ನು ಅರಿತುಕೊಂಡರು. ರಂಗೋಲಿಯ ಪ್ರತಿಯೊಂದು ಬಣ್ಣವೂ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಸಂಕ್ರಾಂತಿಯ ಸಡಗರ ಶಾಲಾ ವಾತಾವರಣವನ್ನೆಲ್ಲ ಆವರಿಸಿತು.
ಇದನ್ನೂ ಓದಿ: ಆಧಾರ್ ಸೇವಾ ಕೇಂದ್ರದಲ್ಲಿ ಜಾಬ್, ಅರ್ಜಿ ಆಹ್ವಾನ
ಈ ಕಾರ್ಯಕ್ರಮದ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಜ್ಞಾನಭಾರತಿ ವಿದ್ಯಾಕೇಂದ್ರ ಯಶಸ್ವಿಯಾಯಿತು.













