ಬೇಲೂರು: (ನ್ಯೂಸ್ ಮಲ್ನಾಡ್ ವರದಿ) ಮದುವೆಗೆ ಹೆಣ್ಣು ಸಿಗದ ಹಿನ್ನೆಲೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಪಟ್ಟಣದಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಗುಡ್ಡರು ಗ್ರಾಮದ ವಿನಯ್ (35) ಮೃತ ವ್ಯಕ್ತಿ.
ಕಳೆದ ಹತ್ತು ವರ್ಷಗಳಿಂದ ತಂದೆ-ತಾಯಿಯೊಂದಿಗೆ ಬೇಲೂರು ಪಟ್ಟಣದ ಶಂಕರ ದೇವರಪೇಟೆಯಲ್ಲಿ ವಾಸವಿದ್ದ ವಿನಯ್ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದನು. ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು.
ಕುಟುಂಬಸ್ಥರ ಪ್ರಕಾರ, ಕಳೆದ ಐದಾರು ವರ್ಷಗಳಿಂದ ವಿವಾಹಕ್ಕಾಗಿ ಹುಡುಗಿ ಹುಡುಕುತ್ತಿದ್ದರೂ ಮದುವೆ ನಿಶ್ಚಯವಾಗದ ಕಾರಣ ಮನನೊಂದು ಹೋಗಿದ್ದನು. ಇದೇ ಮನಸ್ಥಿತಿಯಲ್ಲಿ ಬುಧವಾರ ವಿಷ್ಣು ಸಮುದ್ರ ಕಲ್ಯಾಣಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆಲ್ದೂರು: ಮದುವೆಗೆ ಹೆಣ್ಣು ಸಿಗದ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆ













