ಮೂಡಿಗೆರೆ: ಅಡಿಕೆ ತೋಟದಲ್ಲಿ ಗಜಪಡೆ; ಡೋನ್ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ಮೂಡಿಗೆರೆ: (ನ್ಯೂಸ್‌ ಮಲ್ನಾಡ್‌ ವರದಿ) ಕಾಫಿನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಮೂಡಿಗೆರೆ ತಾಲೂಕಿನ ಗ್ರಾಮಸ್ಥರು ಅಕ್ಷರಶಃ ಗಜಪಡೆಗೆ ಬೆಚ್ಚಿಬಿದ್ದಿದ್ದಾರೆ. ತಾಲೂಕಿನ ಜಿ.ಹೊಸಳ್ಳಿ ಹಾಗೂ ಕಸ್ಕೆಬೈಲು ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಬೀಡುಬಿಟ್ಟಿರುವ ಆನೆಗಳ ಹಿಂಡು, ರೈತರ ಅಪಾರ ಪ್ರಮಾಣದ ಬೆಳೆ ನಾಶಮಾಡಿ ಆತಂಕ ಸೃಷ್ಟಿಸಿದೆ.


ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ


ಗ್ರಾಮದ ಅಡಿಕೆ ತೋಟವೊಂದರಲ್ಲಿ ಸಂಚರಿಸುತ್ತಿದ್ದ ಆನೆಗಳ ಹಿಂಡಿನ ಚಲನವಲನಗಳು ಡೋನ್ ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ವೇಳೆ ಕಂಡುಬಂದ ಒಂದು ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ. ಹಿಂಡಿನಲ್ಲಿದ್ದ ತಾಯಿ ಆನೆಯು ತನ್ನ ಮರಿಗಳನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸುತ್ತಾ ಸಾಗುತ್ತಿತ್ತು. “ಮಕ್ಕಳೇ… ನಾನು ಮುಂದೆ ಹೋಗ್ತಿನಿ, ನನ್ನ ಹಿಂದೆಯೇ ಬನ್ನಿ… ಎಲ್ಲಿಗೂ ಹೋಗಬೇಡಿ” ಎಂದು ಹೇಳುವಂತೆ ಆನೆ ತನ್ನ ಮರಿಗಳನ್ನು ಜೊತೆಯಲ್ಲೇ ಕರೆದುಕೊಂಡು ಹೋಗುವ ವಾತ್ಸಲ್ಯದ ದೃಶ್ಯ ಮನ ಮಿಡಿಯುವಂತಿದೆ. ಮರಿಗಳ ರಕ್ಷಣೆಗಾಗಿ ಆನೆಗಳು ತೋರುತ್ತಿರುವ ಈ ಶಿಸ್ತು ಮತ್ತು ಕಾಳಜಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ, ಈ ದೃಶ್ಯ ಒಂದು ಕಡೆ ಕುತೂಹಲ ಮೂಡಿಸಿದರೆ, ಮತ್ತೊಂದೆಡೆ ರೈತರ ಬದುಕು ದುಸ್ತರವಾಗಿದೆ. ಒಂದೆರಡು ವರ್ಷದ ಅಡಿಕೆ ಗಿಡಗಳನ್ನು ಆನೆಗಳು ತುಳಿದು ಹಾಕಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ನಿತ್ಯವೂ ಆನೆಗಳ ದರ್ಶನವಾಗುತ್ತಿರುವುದರಿಂದ ಕೂಲಿ ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಾಫಿ ಹಾಗೂ ಅಡಿಕೆ ಸುಗ್ಗಿಯ ಕೆಲಸಗಳಿಗೂ ತಡೆಯುಂಟಾಗಿದೆ.


ಇದನ್ನೂ ಓದಿ: LPG ಗ್ರಾಹಕರಿಗೆ ಮಹತ್ವದ ಸೂಚನೆ; ಆಧಾರ್‌ ಇ ಕೆವೈಸಿ ಮಾಡದಿದ್ರೆ ಸಿಗಲ್ಲ ಸಿಲಿಂಡರ್‌ !


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.