ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಬೊಲೆರೋ ವಾಹನದಲ್ಲಿ ದನ ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣ ಸಮೀಪದ ಚಂದನ್ ಕೆಫೆ ಎದುರು ನಡೆದಿದೆ.
ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಮತ್ತೊಂದು ಗುಡ್ ನ್ಯೂಸ್; ಏನದು…?

ಸುಮಾರು ಬೆಳಿಗ್ಗೆ 4:30 ಕ್ಕೆ ಬಣಕಲ್ ಪಟ್ಟಣ ಸಮೀಪದ ಚಂದನ್ ಕೆಫೆ ಎದುರು ನಾಲ್ವರು ದನಗಳನ್ನ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಈ ದೃಶ್ಯ ಸ್ಪಷ್ಟವಾಗಿ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಭಾಗ್ಯಲಕ್ಷ್ಮೀ ಫಲಾನುಭವಿಗಳ ಗಮನಕ್ಕೆ; ಪರಿಪಕ್ವ ಮೊತ್ತ ಪಡೆಯಲು ಅರ್ಜಿ ಆಹ್ವಾನ
ಇತ್ತೀಚೆಗೆ ಈ ಪ್ರದೇಶದಲ್ಲಿ ದನಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, 112 ವಾಹನ ಬೀಟ್ ಸುತ್ತಾ ಮುತ್ತ ತಿರುಗುವುದು ತುಂಬಾ ಅವಶ್ಯಕ ಇದೆ. ಹಾಗೆಯೇ ಈ ದನಕಳ್ಳರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಫೆ ಮಾಲೀಕ ಚಂದನ್ ಪೊಲೀಸ್ ಮೇಲಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)












