ಕಳಸ: (ನ್ಯೂಸ್ ಮಲ್ನಾಡ್ ವರದಿ) ಯುಗಾದಿ ಹಬ್ಬದ ದಿನವೇ ದೇವಾಲಯದ ಮುಂದೆ ವಾಮಾಚಾರ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ

ಅಮಾವಾಸ್ಯೆ ಹಿನ್ನೆಲೆ ಮಾ. 18ರ ಬುಧವಾರ ರಾತ್ರಿ ದೇವಾಲಯದ ಎದುರೇ ವಾಮಾಚಾರ ನಡೆದಿರುವುದು ಕಂಡು ಬಂದಿದೆ. ಕಳಸ ತಾಲೂಕಿನ ಕಂಚಿನಕೆರೆ ಕಾಲಭೈರವೇಶ್ವರ ದೇಗುಲದ ಎದುರೇ ದೊಡ್ಡ-ದೊಡ್ಡ ಕಲ್ಲುಗಳನ್ನಿಟ್ಟು, ಅರಿಶಿನ-ಕುಂಕುಮ, ನಿಂಬೆಹಣ್ಣು ಬಳಸಿ ವಾಮಾಚಾರ ಮಾಡಿದ್ದಾರೆ. ದೇಗುಲದ ಮುಂದೆ ಕಲ್ಲುಗಳಿಂದ ವೃತ್ತ ರಚಿಸಿ ಮಧ್ಯದಲ್ಲಿ ವಾಮಾಚಾರ ನಡೆದಿದ್ದು, ಕಳೆದ ವರ್ಷ ಯುಗಾದಿ ಹಿಂದಿನ ದಿನ ಇದೇ ದೇವಾಲಯದಲ್ಲಿ ಕಳ್ಳತನ ಕೂಡ ನಡೆದಿತ್ತು ಎನ್ನಲಾಗಿದೆ.
ದಕ್ಷಿಣ ಕಾಶಿ ಕಳಸೇಶ್ವರ ಸ್ವಾಮಿ ದೇಗುಲಕ್ಕೆ ಸೇರುವ ಕಾಲಭೈರವನ ದೇಗುಲದಲ್ಲಿ ಪ್ರತಿ ವರ್ಷ ಕಳಸೇಶ್ವರ ದೇಗುಲದ ಗಿರಿಜಾಕಲ್ಯಾಣ ರಥ ಇದೇ ಮಾರ್ಗವಾಗಿ ತೆರಳುವುದಾಗಿದ್ದು, ಅದೇ ಸ್ಥಳದಲ್ಲಿ ವಾಮಾಚಾರ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: LPG ಗ್ರಾಹಕರಿಗೆ ಮಹತ್ವದ ಸೂಚನೆ; ಆಧಾರ್ ಇ ಕೆವೈಸಿ ಮಾಡದಿದ್ರೆ ಸಿಗಲ್ಲ ಸಿಲಿಂಡರ್ !
ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












