ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಕ್ಫ್ ಕಾಯ್ದೆ ವಿರೋಧಿಸಿ ಬಿಜೆಪಿ ವತಿಯಿಂದ ‘ನಮ್ಮ ಭೂಮಿ-ನಮ್ಮ ಹಕ್ಕು’ ಶೀರ್ಷಿಕೆಯಡಿ ಇಂದು ಬೆಳಗ್ಗೆ ಬೆಳಗ್ಗೆ 11 ರಿಂದ ನಾಳೆ ಬೆಳಗ್ಗೆ 11ರವರೆಗೆ ಜನ ಜಾಗೃತಿ ಆಂದೋಲನವನ್ನು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ.
ಇದನ್ನೂ ಓದಿ; ಗ್ರಾಪಂ ನೌಕರರ ಗಮನಕ್ಕೆ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!

ವಕ್ಪ್ ಆಸ್ತಿ ಸಂಬಂಧ ಜಿಲ್ಲೆಯಲ್ಲಿ ಎದುರಾಗಿರುವ ಸಮಸ್ಯೆಗಳ ವಿರುದ್ಧ ಜನಜಾಗೃತಿ ಮೂಡಿಸಲು 24 ಗಂಟೆ ನಿರಂತರ ಮಾಜಿ ಸಚಿವ ಸಿ.ಟಿ.ರವಿ ಹಾಗೂ ಜೀವರಾಜ್ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ.
ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಭರ್ಜರಿ ಸುದ್ದಿ; ಡ್ರೈವಿಂಗ್ ಸೇರಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನ!
ಪ್ರತಿಭಟನೆಯಲ್ಲಿ ಜಯಬಸವಾನಂದ, ಚಂದ್ರಶೇಖರ ಶ್ರೀಗಳು ಭಾಗಿಯಾಗಿದ್ದು, ನೂರಾರು ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಕೈಜೋಡಿಸಿದ್ದಾರೆ.












