ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಮೂರು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಗಂಗನಮಕ್ಕಿ ಪೆಟ್ರೋಲ್ ಬಂಕ್ ಬಳಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಇದೀಗ ವ್ಯಕ್ತಿಯ ಗುರುತು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ; 2 ನೇ ವಾರಕ್ಕೆ ಕಾಲಿಟ್ಟ ಜಲಪಾತ ಸಿನಿಮಾ; ರಿವ್ಯೂಸ್ ಮತ್ತು ರೇಟಿಂಗ್ ನ ರೇಸ್ ನಲ್ಲೂ ಮುಂದಿರುವ ಪರಿಸರ ಕಾಳಜಿ ಸಿನಿಮಾ

ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಬಿಲ್ಲಾಡಿ ಗ್ರಾಮದ ನಂದೀಶ್ ಆಚಾರಿ ಎಂದು ಗುರುತಿಸಲಾಗಿದೆ. ಬಿಲ್ಲಾಡಿ ಗ್ರಾಮದ ಶಂಕರ ಆಚಾರಿ ಎಂಬುವವರ ಪುತ್ರನಾದ ನಂದೀಶ್ 6 ವರ್ಷದ ಹಿಂದೆಯೇ ಮನೆ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಮದ್ಯವ್ಯಸನಿಯಾಗಿದ್ದ ನಂದೀಶ್ ಊರೂರು ತಿರುಗುತ್ತಾ ಮೂಡಿಗೆರೆಗೆ ಬಂದು ಕೆಲವು ಕಡೆ ಕೆಲಸ ಮಾಡಿದ್ದ ಎಂದು ತಿಳಿದುಬಂದಿದೆ. ಸೋಮವಾರ ರಾತ್ರಿ ಮೂಡಿಗೆರೆ ಗಂಗನಮಕ್ಕಿ ಸಮೀಪ ವಿಷಸೇವನೆ ಮಾಡಿರುವ ಸ್ಥಿತಿಯಲ್ಲಿ ಕಂಡು ಬಂದು ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ಇದನ್ನೂ ಓದಿ; ಆಹಾರ ಇಲಾಖೆಯಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್; 3 ಲಕ್ಷ ರೇಷನ್ ಕಾರ್ಡ್ ರದ್ದು | ಕಾರಣವೇನು?
ವ್ಯಕ್ತಿಯ ಗುರುತು ಸಿಗದೇ ಇದ್ದ ಕಾರಣ ಮೃತದೇಹವನ್ನು ಚಿಕ್ಕಮಗಳೂರು ಚಿತಾಗಾರದಲ್ಲಿ ಇರಿಸಿ ವಾರಸುದಾರರ ಪತ್ತೆಗಾಗಿ ಪ್ರಕಟಣೆ ಹೊರಡಿಸಲಾಗಿತ್ತು. ಇದೀಗ ಆತನ ಮನೆಯವರ ಸಮ್ಮುಖದಲ್ಲಿ ನಿನ್ನೆ ಚಿಕ್ಕಮಗಳೂರು ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಮಾನತು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಿ ಜಿಲ್ಲಾದ್ಯಕ್ಷ ಎಚ್ ಸಿ ಕಲ್ಕುರುಡಪ್ಪ ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಪಕ್ಷದ ತೀರ್ಮಾನಗಳನ್ನು ಪದೇ ಪದೇ ಉಲ್ಲಂಘಿಸಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಪಕ್ಷದ ಘನತೆಗೆ ಕುಂದುಂಟು ಮಾಡಿ ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಅಲ್ಲದೇ ಹಲವು ಬಾರಿ ಖುದ್ದು ಹಾಜರಾಗಿ ಸಮಜಾಯಿಷಿ ನೀಡಲು ತಿಳಿಸಿದರೂ ಇದುವರೆಗೂ ಸಮಜಾಯಿಷಿ ನೀಡಿರುವುದಿಲ್ಲ. ಆದ್ದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ನಿಮ್ಮನ್ನು (ವರಸಿದ್ದಿ ವೇಣುಗೋಪಾಲ್) ಅಮಾನತು ಮಾಡಲಾಗಿದೆ” ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ರಾಜೀನಾಮೆ ವಾಪಸ್ ಪಡೆದಿದ್ದ ವೇಣುಗೋಪಾಲ್:
ಕಳೆದ ನಾಲ್ಕು ತಿಂಗಳಿನಿಂದ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಬಿಜೆಪಿ ನಗರಸಭೆ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಜಟಾಪಟಿ ನಡೆಯುತ್ತಿದ್ದು, ಪಕ್ಷದ ನಾಯಕರ ಸೂಚನೆ ಮೇರೆಗೆ ಎಡರನೇ ಬಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವರಸಿದ್ದಿ ವೇಣುಗೋಪಾಲ್ ಇತ್ತೀಚೆಗೆ ರಾಜೀನಾಮೆ ವಾಪಸ್ ಪಡೆದು ಯಾರ ಕಣ್ಣಿಗೂ ಬೀಳದೆ ಕಣ್ಮರೆಯಾಗಿದ್ದರು.












