ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಯಲ್ಲಿ ಹಸಿರು ಫೌಂಡೇಶನ್ ನೇತೃತ್ವದಲ್ಲಿ ಬೃಹತ್ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದನ್ನೂ ಓದಿ: ಮುದ್ರಾ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ದೇವರಮನೆ ಪ್ರವಾಸಿ ತಾಣದಲ್ಲಿ ಇಂದು ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಮಳೆಯ ನಡುವೆ ಸ್ಥಳೀಯರು ಹಾಗೂ ಹಸಿರು ಫೌಂಡೇಷನ್ ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಸಿರು ಫೌಂಡೇಷನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ, ವಾರ್ಷಿಕವಾಗಿ ಸರಾಸರಿ ಒಂದು ಲಕ್ಷ ಗಿಡ ನೆಡುವುದು ಹಸಿರು ಫೌಂಡೇಶನ್ ಗುರಿಯಾಗಿದ್ದು, ಇಂದು ಅದರ ಅಂಗವಾಗಿ ದೇವರ ಸನ್ನಿಧಿಯಲ್ಲಿ ಸಸಿಗಳ ನೆಡುವು ಮುಖಾಂತರ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯದ ನಾನಾ ಕಡೆ ಸಸಿಗಳನ್ನು ನೆಡಲು ಉತ್ಸುಕರಾಗಿದ್ದೇವೆ ಎಂದರು.
ಸ್ಥಳೀಯರು ಹಾಗೂ ಬಣಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುಬ್ರಹ್ಮಣ್ಯ ತ್ರಿಪುರ ಮಾತನಾಡಿ, ಹಸಿರು ಫೌಂಡೇಶನ್ ನಿರಂತರವಾಗಿ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿದ್ದಾರೆ. ಅವರಿಗೆ ನಮ್ಮ ಸಂಪೂರ್ಣ ಸಹಕಾರ ಇದ್ದೆ ಇರುತ್ತದೆ ಎಂದರು.

ಇದನ್ನೂ ಓದಿ: PUC ಪಾಸ್ ಆದ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ ಶಿಪ್; ನೇರ ನಿಮ್ಮ ಖಾತೆಗೆ ಜಮಾ!
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ರಮೇಶ್ ಹೊಸಕೇರೆ ಮಾತನಾಡಿ, ಹಸಿರು ಫೌಂಡೇಶನ್ ಕೆಲಸಗಳು ಎಲ್ಲರಿಗೂ ಮಾದರಿ ಆಗುವಂತದ್ದು, ಇವರಿಗೆ ನಮ್ಮ ಸಹಕಾರ ಇರುತ್ತದೆ. ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ಸ್ಮರಿಸಬೇಕು ಹಸಿರು ಫೌಂಡೇಷನ್ ಗೆ ಒಳ್ಳೆಯದಾಗಲಿ ಎಂದರು.
ಸಫಾಯಿ ಕರ್ಮಚಾರಿ ಮಾಜಿ ಅಧ್ಯಕ್ಷರಾದ ಕುರುವಂಗಿ ವೆಂಕಟೇಶ್ ಮಾತನಾಡಿ, ಹಸಿರು ಫೌಂಡೇಷನ್ ಸಂಸ್ಥೆ ಪ್ರತಿ ಕಾರ್ಯಕ್ರಮಗಳಿಗೆ ನಾನು ಭಾಗಿಯಾಗುತ್ತಿದ್ದೇನೆ. ಒಳ್ಳೆಯ ಕಾರ್ಯಗಳು ನಿರಂತರವಾಗಿ ಸಾಗಲಿ ಪ್ರಕೃತಿ ಉಳಿದರೆ ನಾವು ಎಂದರು.
ಈ ಸಂದರ್ಭದಲ್ಲಿ ದೇವರಮನೆ ದೇವಸ್ಥಾನ ಕಮಿಟಿ ಸದಸ್ಯರು, ಗಿರೀಶ್ ಹಳ್ಳಿಬೈಲ್, ಮದನ್ ಹೆಗ್ಡೆ, ಮೂಡಿಗೆರೆ ಹೋಮ್ ಸ್ಟೇ ಹಾಗೂ ರೆಸಾರ್ಟ್ ಮಾಲೀಕರ ಅಧ್ಯಕ್ಷರು ಜಗದೀಶ್ ಗೌಡ್ರು ಗುತ್ತಿ, ಚಲವಾದಿ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ, ನೌಕರರರ ಸಂಗದ ಅಧ್ಯಕ್ಷರು ನವೀನ್, ಕೆಡಿಪಿ ಸದಸ್ಯರು ಸುರೇಂದ್ರ ಉಗ್ಗೆಹಳ್ಳಿ, ರವಿ ಕುನಹಳ್ಳಿ, ಹಸಿರು ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್, ಕಾರ್ಯದರ್ಶಿ ಅಭಿಜಿತ್ ಹೆಡದಾಳು, ಖಜಾಂಚಿ ಸುನಿಲ್ ಊರುಬಗೆ, ನಿರ್ದೇಶಕರುಗಳಾದ ಅದೀಪ್, ಸುಮಂತ್, ಪ್ರದೀಪ್, ಪೂರ್ಣೆಶ್, ಶೋಧನ್, ಸಮರ್ಥ್ ಇದ್ದರು.
ಇದನ್ನೂ ಓದಿ: 10th – 2PUC ವಿದ್ಯಾರ್ಥಿಗಳ ಗಮನಕ್ಕೆ; ಮಿಸ್ ಮಾಡ್ದೆ ಈ ಸುದ್ದಿ ಓದಿ












