ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಪ್ರವಾಸಿ ತಾಣವಾಗಿರುವ ಎತ್ತಿನ ಭುಜದಲ್ಲಿ ಹಸಿರು ಫೌಂಡೇಶನ್ ವತಿಯಿಂದ ಭಾನುವಾರ ಸ್ವಚ್ಛತಾ ಕಾರ್ಯ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದವರಿಗೆ 50,000ರೂ ವರೆಗೆ ಸ್ಕಾಲರ್ ಶಿಪ್; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಮಳೆಯನ್ನು ಲೆಕ್ಕಿಸದೇ ವಿವಿಧ ರಾಜ್ಯಗಳಿಂದ ಆಗಮಿಸಿದ ಪರಿಸರ ಪ್ರೇಮಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ವೇಳೆ ಫೌಂಡೇಶನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ, ಎತ್ತಿನ ಭುಜದಂತಹ ಸುಂದರ ಪ್ರವಾಸಿ ತಾಣದಲ್ಲಿ ಪ್ಲಾಸ್ಟಿಕ್ ಬಾಟಲ್ಗಳ ರಾಶಿ ಕಂಡು ಬೇಸರವಾಗಿದೆ. ಟ್ರಕ್ಕಿಂಗ್ಗೆ ಬರುವವರು ವಿದ್ಯಾವಂತರಾಗಿದ್ದರೂ ಪರಿಸರದ ಹಾಳುಮಾಡುತ್ತಿರುವುದು ವಿಷಾದಕರ. ಈ ದೃಷ್ಯವು ಅವಿದ್ಯಾವಂತರನ್ನೂ ನಾಚಿಸುತ್ತೆ ಎಂದರು.
ಇದನ್ನೂ ಓದಿ: 60 ಪರ್ಸೆಂಟೇಜ್ ತೆಗೆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ಈ ಸಂದರ್ಭದಲ್ಲಿ ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿ, ಎತ್ತಿನ ಭುಜ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯ ಬಾಟಲ್ಗಳ ವಿರುದ್ಧ ಕಠಿಣ ನಿಯಮ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರೀನ್ ನೆಸ್ಟ್ ಹೋಂಸ್ಟೇ ಮಾಲೀಕರಾದ ಶಶಿ ಮಲ್ನಾಡ್, ಬೆಂಗಳೂರು ಟ್ರಕ್ಕಿಂಗ್ ಗ್ರೂಪ್ ಅಡ್ಮಿನ್ ಶ್ರೀಮತಿ ಭುವನ ಮತ್ತು ಅವರ ಸ್ನೇಹಿತರು ಸಹ ಭಾಗವಹಿಸಿ ಕಾರ್ಯಕ್ಕೆ ಬೆಂಬಲ ನೀಡಿದರು. ಹಸಿರು ಫೌಂಡೇಶನ್ ನಿರ್ದೇಶಕರು ಸುನಿಲ್ ಊರುಬಗೆ, ಶೋಧನ್ ಹೊಸಕೆರೆ, ಜಯಂತ್ ಹೊಸಕೆರೆ, ಅದೀಪ್ ಊರುಬಗೆ, ಪ್ರದೀಪ್ ಊರುಬಗೆ, ಅಭಿಜಿತ್, ವಿನುಪ್ರಸಾದ್, ಪೂರ್ಣೇಶ್, ಪೃತ್ವಿ, ಸುಮಂತ್ ಮತ್ತಿತರರು ಉಪಸ್ಥಿತರಿದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ರಾಜ್ಯದಲ್ಲಿ ಆಸ್ತಿ ನೋಂದಣಿಗೆ ಇ-ಸಹಿ ಕಡ್ಡಾಯ; ಹೊಸ ನಿಯಮ ಜಾರಿ!












