ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಬಸ್ಸೊಂದು ಪಲ್ಟಿಯಾಗಿ ಚಾಲಕ ಸೇರಿ ಮೂವರು ಗಾಯಗೊಂಡಿರುವ ಘಟನೆ ಕೊಪ್ಪ ತಾಲೂಕಿನ ಸೀಗೋಡು ಬಳಿ ಇಂದು (ಶನಿವಾರ) ಮುಂಜಾನೆ ಸಂಭವಿಸಿದೆ. ಗಾಯಗೊಂಡವರನ್ನು ಕಾರ್ತಿಕ್, ಮಧು, ಚೈತ್ರ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮುದ್ರಾ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 17 ಜನ ಸ್ನೇಹಿತರು ವೀಕೆಂಡ್ ಪ್ರವಾಸಕ್ಕೆಂದು ಬೆಂಗಳೂರಿನಿಂದ ಆಗುಂಬೆ ಕಡೆಗೆ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕೊಪ್ಪ ತಾಲೂಕಿನ ಸೀಗೋಡು ಬಳಿ ಬರುತ್ತಿದ್ದಂತೆ ಚಾಲಕ ನಿದ್ದೆಗೆ ಜಾರಿದ್ದು ಪರಿಣಾಮ ನಿಯಂತ್ರಣ ಕಳೆದುಕೊಂಡ ಪ್ರವಾಸಿ ಬಸ್ ರಸ್ತೆ ಬದಿ ಪಲ್ಟಿಯಾಗಿದೆ.
ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: PUC ಪಾಸ್ ಆದ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ ಶಿಪ್; ನೇರ ನಿಮ್ಮ ಖಾತೆಗೆ ಜಮಾ!












