ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಳೆದ 4-5 ತಿಂಗಳಿನಿಂದ ಗ್ರಾಮ ಸಹಾಯಕರಿಗೆ ವೇತನ ಪಾವತಿಯಾಗದೆ ಆತಂತ್ರ ಸ್ಥಿತಿಗೆ ತಲುಪಿದ್ದಾರೆ.
ಇದನ್ನೂ ಓದಿ: ಮುದ್ರಾ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಶೃಂಗೇರಿ ತಾಲೂಕಿನಲ್ಲಿ 10 ಗ್ರಾಮ ಸಹಾಯಕರಿಗೆ ಮಾತ್ರ 18 ಲಕ್ಷ ರೂ. ಅನುದಾನವನ್ನು ಮರುಹಂಚಿಕೆ ಮಾಡಿ ಆದೇಶಿಸಲಾಗಿದೆ. ಆದರೆ ಉಳಿದ 11 ಮಂದಿಗೆ ವೇತನ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸರ್ಕಾರಿ ನಿಯಮದಂತೆ ಜಾಸ್ತಿಯಾಗಿ ನಿಯೋಜನೆಗೊಂಡವರ ಬಗ್ಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರನ್ನು ಕಾಯಂಗೊಳಿಸಿ ಸೇವಾ ಭದ್ರತೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಗ್ರಾಮ ಸಹಾಯಕರ ಕರ್ತವ್ಯ ಮಾತ್ರ ಸಾಕಷ್ಟಿದ್ದು ಪ್ರತಿಯೊಂದಕ್ಕೂ ಇವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ನಿವೇಶನ, ಪ್ರಾಕೃತಿಕ ವಿಕೋಪ, ಮಾಸಾಶನ, ಹಲವು ಬಗೆಯ ಸಮೀಕ್ಷೆಗಳು, ಚುನಾವಣೆ ಕೆಲಸ, ರಾತ್ರಿ ಪಾಳಿ ಕೆಲಸ, ಬೆಳೆ ಸಮೀಕ್ಷೆ, ಕೃಷಿ ಗಣತಿ, ಆಧಾರ್ ಮತ್ತು ಪಹಣಿ ಸೀಡಿಂಗ್, ಕಂದಾಯ ವಸೂಲಿ ಸೇರಿದಂತೆ ಹಲವು ಬಗೆಯ ಹೊಣೆಗಳು ಇವರಿಗೆ ಇವೆ.
ಇದನ್ನೂ ಓದಿ: PUC ಪಾಸ್ ಆದ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ ಶಿಪ್; ನೇರ ನಿಮ್ಮ ಖಾತೆಗೆ ಜಮಾ!
ಈ ಮಧ್ಯೆ ಕೇಸ್ ವರ್ಕರ್ಗಳು ಇಲ್ಲ ಎನ್ನುವ ಕಾರಣಕ್ಕೆ ಗ್ರಾಮ ಸಹಾಯಕರನ್ನು ತಾಲೂಕು ಕಚೇರಿಯಲ್ಲಿ ನಿಯೋಜಿಸಿರುವ ಪರಿಣಾಮ ಗ್ರಾಮಗಳಲ್ಲಿ ಕೆಲಸ ಮಾಡುವ ಗ್ರಾಮ ಸಹಾಯಕರ ಮೇಲೆ ಒತ್ತಡ ಹಾಕಿದೆ. ಹೀಗಾಗಿ ಗ್ರಾಮ ಸಹಾಯಕರಿಗೆ ಕೆಲಸದ ಒತ್ತಡ ಜಾಸ್ತಿ ಇದೆ. ಆದರೆ ವೇತನ ಮಾತ್ರ ಸರಿಯಾಗಿ ಸಿಗುತ್ತಿಲ್ಲ ಎಂಬ ಕೊರಗು ಇವರದ್ದಾಗಿದೆ. ತಾಲೂಕಿನಲ್ಲಿ 21 ಜನ ಗ್ರಾಮ ಸಹಾಯಕರಿಗೆ ಆರ್ಥಿಕ ಭದ್ರತೆಯೂ ಇಲ್ಲದೆ ಹೇಳಿಕೊಳ್ಳಲು ಬೇರೆ ಉದ್ಯೋಗವೂ ಇಲ್ಲದೇ ಬೀದಿಗೆ ಬರುವ ಸ್ಥಿತಿಯಲ್ಲಿದ್ದಾರೆ.












