ಕಡೂರು: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಹೊರ ವಲಯದ ಬೈಪಾಸ್ ರಸ್ತೆಯ ಕನಕರಾಯನ ಗುಡ್ಡದ ಬಳಿ ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಆಗಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ. ದಾವಣಗೆರೆ ಪ್ರತಾಪ್ ರಾವ್ (52) ಮೃತ ದುರ್ದೈವಿ.
ಇದನ್ನೂ ಓದಿ: AI ಕ್ರಾಂತಿಗೆ ಹೆಜ್ಜೆ; ಯತಿಕಾರ್ಪ್ನಿಂದ 10,000 ಮಂದಿಗೆ 20,000 ಮೌಲ್ಯದ ಉಚಿತ AI ಶಿಕ್ಷಣ ಕಿಟ್

ಮೃತರ ಪತ್ನಿ ಸೋಫಿಯಾ, 4 ವರ್ಷದ ಮಗು ಮತ್ತು ಲಾರಿ ಚಾಲಕ ವಿಜಯ್ ಕುಮಾರ್ ಅವರಿಗೆ ಗಾಯಗಳಾಗಿದ್ದು, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಪ್ರತಾಪ್ ರಾವ್ ಕುಟುಂಬಸ್ಥರೊಂದಿಗೆ ದಾವಣಗೆರೆಯಿಂದ ಮೈಸೂರಿಗೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಮೂಲಕ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ರಸ್ತೆ ಬದಿಯಲ್ಲಿದ್ದ ಟ್ಯಾಂಕರ್ ಲಾರಿಯನ್ನು ಕ್ರೇನ್ನಿಂದ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜಾತಿ ಪ್ರಮಾಣ ಪತ್ರ ಪಡೆಯುವುದು ಹೇಗೆ?; ಯಾರೆಲ್ಲಾ ಅರ್ಹರು? ಪ್ರಯೋಜನಗಳೇನು?












