ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಹಲವು ಕಡೆ ಸಂಪರ್ಕ ಕಡಿತಗೊಂಡಿದೆ. ಹಾಗೆಯೇ ಬಾಳೆಹೊನ್ನೂರಿನಿಂದ ಕಳಸ-ಹೊರನಾಡು ಸಂಪರ್ಕಿಸುವ ರಸ್ತೆಯಲ್ಲಿ ಬರುವ ಮಾಗುಂಡಿ ಗ್ರಾಮದ ಮಾಹಲ್ಗೋಡು ಗ್ರಾಮದ ಸೇತುವೆ ಶಿಥಿಲಗೊಂಡಿದ್ದು, ಸೇತುವೆ ಮೇಲೆಯೇ ನೀರು ಹರಿಯುತ್ತಿರುವುದರಿಂದ ಸಂಚಾರ ಕೂಡ ಸ್ಥಗಿತಗೊಂಡಿದೆ.
ಇದನ್ನೂ ಓದಿ: ಈ ಮೂರು ದಾಖಲೆ ಇದ್ದರೆ ಕ್ಯಾನ್ಸಲ್ ಆಗಲ್ಲ ರೇಷನ್ ಕಾರ್ಡ್; ಇಲ್ಲಿದೆ ಮಾಹಿತಿ

ಇದರಿಂದ ಅಪಾಯದ ಮುನ್ಸೂಚನೆ ಅರಿತ ಬಾಳೆಹೊನ್ನೂರು ಪಿಎಸೈ ರವೀಶ್, ಬಾಳೆಹೊನ್ನೂರಿನಿಂದ ಕಳಸ-ಹೊರನಾಡು ಸಂಪರ್ಕಿಸುವ ಮಾಹಲ್ಗೋಡು ಗ್ರಾಮದ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ನಿಯಮ ಫುಲ್ ಬದಲಾವಣೆ!; ಹೊಸ ರೂಲ್ಸ್ ಏನು? ಇಲ್ಲಿದೆ ನೋಡಿ
ಆದ್ದರಿಂದ ಹೊರನಾಡು ಕಳಸ ಹೋಗುವ ಪ್ರಯಾಣಿಕರು ಬದಲಿ ಮಾರ್ಗವಾಗಿ 1. ಬಾಳೆಹೊನ್ನೂರು- ಮಾಗುಂಡಿ- ಬಾಳೂರು- ಹಿರೇಬೈಲು-ಕಳಸ- ಹೊರನಾಡು ತಲುಪಬಹುದು. ಹಾಗೆಯೇ 2. ಬಾಳೆಹೊನ್ನೂರು- ಜಯಪುರ- ಬಸರಿಕಟ್ಟೆ- ಬಾಳೆಹೊಳೆ- ಕಳಸ- ಹೊರನಾಡು ತಲುಪಬಹುದು.
ಇದನ್ನೂ ಓದಿ: ಈ ಜಿಲ್ಲಾ ಅಂಗನವಾಡಿಯಲ್ಲಿ ಜಾಬ್ ಆಫರ್; 344 ಹುದ್ದೆಗಳಿಗೆ ಅರ್ಜಿ ಆಹ್ವಾನ;10th ಪಾಸ್ ಆದವರು ಈ ರೀತಿ ಅರ್ಜಿ ಸಲ್ಲಿಸಿ














