ಶೃಂಗೇರಿ/ಹೊರನಾಡು: (ನ್ಯೂಸ್ ಮಲ್ನಾಡ್ ವರದಿ) ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಪ್ರಸಾದ, ಪೂಜೆ ಹೆಸರಲ್ಲಿ ಈ ಇಬ್ಬರು ಆರೋಪಿಗಳು ನಕಲಿ ವೆಬ್ಸೈಟ್ ಓಪನ್ ಮಾಡಿ, ಹಣ ಪಡೆದು ವಂಚನೆ ಎಸಗುತ್ತಿದ್ದ ತೆಲಂಗಾಣದ ಮೂಲದ ಇಬ್ಬರು ಆರೋಪಿಗಳನ್ನು ಇದೀಗ ಚಿಕ್ಕಮಗಳೂರು ಸೆನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತೆಲಂಗಾಣ ಮೂಲದ ಸುದೀಪ್ ಮತ್ತು ಅನಿಲ್ ಕುಮಾರ್ ಬಂಧಿತ ಆರೋಪಿಗಳು.
ಇದನ್ನೂ ಓದಿ: 4-6ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ, ಏನದು?

http://www.devaraseve.com ಹೆಸರಿನಲ್ಲಿ ಪ್ರತಿಷ್ಠಿತ ದೇವಾಲಯಗಳ ಹೆಸರು ಬಳಕೆ ಮಾಡುತ್ತಿದ್ದರು. ರಾಜ್ಯ ಮತ್ತು ದೇಶದ ಪ್ರತಿಷ್ಠಿತ ದೇಗುಲಗಳ ಬಗ್ಗೆ ವೆಬ್ಸೈಟ್ನಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದು, ವಿಶೇಷ ಪೂಜೆ, ಪ್ರಸಾದ ಮತ್ತು ವಿಶೇಷ ಸೇವೆ ಹೆಸರಿನ ಲಿಂಕ್ ಅಲ್ಲಿ ವಂಚನೆ ಎಸಗುತ್ತಿದ್ದರು.
ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಹೆಸರಿನಲ್ಲಿ ಕೂಡ ಹಣ ಪಡೆದು ವಂಚನೆಯ ಬಗ್ಗೆ ಹೊರನಾಡು ದೇವಾಲಯಕ್ಕೆ ನಿರಂತರವಾಗಿ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಮಿಸ್ ಮಾಡ್ದೆ ಈ ಸುದ್ದಿ ಓದಿ












