ಕಳಸ – ಹೊರನಾಡು ರಸ್ತೆಯಲ್ಲಿ ವಾಹನ ಸಂಚಾರ ಬಂದ್

ಕಳಸ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸ-ಹೊರನಾಡು ರಸ್ತೆಯಲ್ಲಿ ಏಪ್ರಿಲ್ 25 ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.


ಇದನ್ನೂ ಓದಿ: PUC ಪಾಸ್‌ ಆದ ವಿದ್ಯಾರ್ಥಿಗಳ ಗಮನಕ್ಕೆ; 25,000 ರೂ ಸ್ಕಾಲರ್ಶಿಪ್‌ ಲಭ್ಯ ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಹೆಬ್ಬಾಳೆ ಸೇತುವೆಯ ತಡೆಗೋಡೆ ಮತ್ತು ಅಪ್ರೋಚ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬದಲಿ ರಸ್ತೆ ಬಳಸುವಂತೆ ಸೂಚನೆ:
ಕಳಸ-ಹೊರನಾಡು ಸಂಪರ್ಕಿಸಲು ಬದಲಿ ರಸ್ತೆಯಾದ ಹಳುವಳ್ಳಿ-ದಾರಿಮನೆ ಕ್ರಾಸ್ ರಸ್ತೆ ಬಳಸಬೇಕಾಗಿದೆ. ಹೊರನಾಡು ರಸ್ತೆ ಏಕಪಥದ ರಸ್ತೆಯಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.


ಇದನ್ನೂ ಓದಿ: ಇ-ಖಾತೆ ಪಡೆಯುವುದು ಇನ್ನು ಸುಲಭ; ಈ ದಾಖಲೆಯ ಅಗತ್ಯವಿಲ್ಲ


ಶೃಂಗೇರಿಯಿಂದ ಹೊರನಾಡಿಗೆ ಬರುವ ವಾಹನಗಳನ್ನು ಶೃಂಗೇರಿ-ಕೂಳೂರು-ಕೊಗ್ರೆ-ಶಾಂತಿಗ್ರಾಮ-ಬೈಲುಮನೆ-ಮೆಣಸಿನಹಾಡ್ಯ ಮಾರ್ಗ ಬಳಸಬಹುದಾಗಿದೆ. ಈ ರಸ್ತೆಯು ತೀವ್ರ ತಿರುವುಗಳಿಂದ ಕೂಡಿರುವುದರಿಂದ ಉದ್ದ ಚಾಸಿ ವಾಹನಗಳನ್ನು (ಬಸ್ಸು, ಲಾರಿ ಇತರೆ) (ಲಾಂಗ್ ಚಾಸ್ಸಿ) ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.


ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – 30 ಸಾವು; ಕ್ಷಣಾರ್ಧದಲ್ಲಿ ಸ್ಥಳಕ್ಕೆ ತಲುಪಿದ ಸೇನೆ, ಪೊಲೀಸ್, ಹಾಗೂ ವೈದ್ಯರ ತಂಡ ; ತಪ್ಪಿದ ಮಹಾ ದುರಂತ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.