ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಂಗಳೂರು ಶೃಂಗೇರಿ ರಾ.ಹೆ.169 ರ ನೆಮ್ಮಾರು ತನಿಕೋಡು ಬಳಿ ಬೈಕ್ನಿಂದ ಬಿದ್ದು ಯುವಕ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೃತ ಪ್ರದೀಪ್ (28), ಮಹೇಶ್ ಬೈಕ್ನಲ್ಲಿ ಹಿಂಬದಿ ಕುಳಿತು ಕಾರ್ಕಳ ಕಡೆ ಹೋಗುವಾಗ ರಾ.ಹೆ.169 ರ ತನಿಕೋಡು ಅರಣ್ಯ ತಪಾಸಣೆ ಕೇಂದ್ರದ ಸಮೀಪ ಎದುರಿನಿಂದ ಬರುತ್ತಿದ್ದ ಲಾರಿಗೆ ಸೈಡ್ ಕೊಡಲು ಹೋದಾಗ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಿಕಿತ್ಸೆಗಾಗಿ ಶೃಂಗೇರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿದೆ ರಾತ್ರಿ ಮೃತಪಟ್ಟಿದ್ದಾನೆ.

ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












