ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಶಿಳ್ಳೆಖ್ಯಾತರ ಸಮುದಾಯದವರು ಸ್ಮಶಾನ ಜಾಗದ ಕೊರತೆಯಿಂದ ನೆಮ್ಮದಿಯ ಅಂತ್ಯಸಂಸ್ಕಾರ ಮಾಡಲಾಗದ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ರಾವೂರು ಮೀನ್ ಕ್ಯಾಂಪಿನಲ್ಲಿ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಷನ್!

ಸುಮಾರು 150 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದೆ ಅನಿವಾರ್ಯವಾಗಿ ಭದ್ರಾ ಹಿನ್ನೀರಿನ ನಡುಗಡ್ಡೆಯಲ್ಲಿ ಶವ ಸಂಸ್ಕಾರಕ್ಕೆ ಅವಲಂಬಿಸಿದ್ದಾರೆ.


ಗುಂಡಿ ತೆಗೆದಂತೆಲ್ಲ ನೀರು ತುಂಬಿಕೊಳ್ಳುವ ಜಾಗದಲ್ಲಿ ಶವ ಸಂಸ್ಕಾರ:
ಹೌದು, ಈ ಕುಟುಂಬಗಳಲ್ಲಿ ಯಾರಾದರೂ ಮೃತರಾದರೆ ಅವರ ಅಂತ್ಯಸಂಸ್ಕಾರ ಮಾಡಲು ಉಕ್ಕಡದಲ್ಲಿ ಶವ ಸಾಗಿಸಿ ಅಂತ್ಯಕ್ರಿಯೆ ಮಾಡಬೇಕು. ಮಳೆಗಾಲದಲ್ಲಿ ಮತ್ತು ಭದ್ರೆಯಲ್ಲಿ ಹಿನ್ನೀರು ತುಂಬಿಕೊಂಡಿದ್ದಾಗ ನಡುಗಡ್ಡೆಗೆ ಶವ ತೆಗೆದುಕೊಂಡು ಹೋಗಲು ಕಷ್ಟವಾಗುತ್ತದೆ. ಮಳೆಗಾಲ ಮತ್ತು ನೀರು ಕಡಿಮೆಯಾಗುವವರೆಗೂ ಅಂತ್ಯಕ್ರಿಯೆ ನಡೆಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಕೆನರಾ ಬ್ಯಾಂಕ್ ನಲ್ಲಿ ಜಾಬ್ ಆಫರ್; ವಿದ್ಯಾರ್ಹತೆ, ಸಂಬಳ ಕುರಿತು ಇಲ್ಲಿದೆ ಡಿಟೈಲ್ಸ್
ಇನ್ನು ಭದ್ರಾ ಹಿನ್ನೀರಿನ ನಡುಗಡ್ಡೆಯು ನೀರಿನಿಂದಾಗಿ ಸಂಪೂರ್ಣ ತೇವಾಂಶದಿಂದ ಕೂಡಿರುತ್ತದೆ. ಶವಸಂಸ್ಕಾರಕ್ಕೆ ಗುಂಡಿ ತೆಗೆದಂತೆಲ್ಲ ನೀರು ತುಂಬಿಕೊಳ್ಳುತ್ತಿರುತ್ತದೆ. ಗುಂಡಿಯಿಂದ ನೀರನ್ನು ಎತ್ತಿಹಾಕಿ ಎಲೆಗಳನ್ನು ಹಾಸಿ ಅಂತ್ಯಕ್ರಿಯೆ ಮಾಡುವ ಸ್ಥಿತಿ ಇಲ್ಲಿನ ಕುಟುಂಬಗಳಿಗೆ.

ಶವ ಸಂಸ್ಕಾರ ಮಾಡಲು ಸೂಕ್ತ ಜಾಗ ನೀಡುವಂತೆ ಒತ್ತಾಯ:
ಕಳೆದ 80 ವರ್ಷಗಳಿಂದ ಒಂದು ಸ್ಮಶಾನ ಲಭಿಸಿಲ್ಲ. ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಹಂದೂರು ಹತ್ತಿರ ನಿರ್ಮಾಣ ಹಂತದ ಸೇತುವೆ ಬಳಿ ಜಾಗ ಮಂಜೂರು ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಲಾಗಿತ್ತು. ಒಂದು ವೇಳೆ ಆ ಜಾಗ ನೀಡಲು ಸಾಧ್ಯವಾಗದಿದ್ದರೆ ಬೇರೆ ಕಡೆಯಾದರೂ ಒದಗಿಸಿ ಶವಸಂಸ್ಕಾರ ಮಾಡಲು ಪರದಾಡುವುದನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ ಯೋಜನೆಯ 2000 ಹಣ ಈ ದಿನ ಜಮಾ!; ಹಣ ಬಾರದೇ ಇದ್ದಲ್ಲಿ ಜಸ್ಟ್ ಈ ರೀತಿ ಮಾಡಿ
ಮೀನ್ ಕ್ಯಾಂಪಿನ ನಿವಾಸಿಗಳು ಸರ್ವೆ ನಂಬರ್-157ರಲ್ಲಿ ಒಂದು ಎಕರೆ ಜಾಗ ಕೇಳಿದ್ದಾರೆ. ಆ ಜಾಗವನ್ನು ಪ್ರವಾಸೋದ್ಯಮ ಇಲಾಖೆಯವರು ಪ್ರಮಾಸೋದ್ಯಮ ಅಭಿವೃದ್ಧಿಗೆ ಬಳಸಿಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ. ಸ್ಮಶಾನಕ್ಕೆ ಬೇರೆ ಕಡೆ ಜಾಗ ಹುಡುಕಿಕೊಡಬೇಕಿದೆ ಎಂದು ಮೆಣಸೂರು ಗ್ರಾಮ ಪಂಚಾಯಿತಿಯ ಪಿಡಿಒ ಸಂತೋಷ್ ಹೇಳಿದ್ದಾರೆ.
ಇದನ್ನೂ ಓದಿ: 17,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ













