
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಹೆಣ ಊಳಲು ಜಾಗವಿಲ್ಲದೆ ಹಳ್ಳಿಗರು ಪಂಚಾಯಿತಿ ಮುಂದೆ ಮೃತದೇಹವಿಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಉಡೇವಾ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ; ವಾಹನ ಖರೀದಿಸಲು ಸಬ್ಸಿಡಿ; ಆಧಾರ್ ಕಾರ್ಡ್ ಇದ್ರೆ ಈ ರೀತಿ ಅರ್ಜಿ ಸಲ್ಲಿಸಿ

ಇಲ್ಲಿನ 1200 ಮನೆಗಳ ಗ್ರಾಮಕ್ಕೆ ಹೆಣ ಊಳಲು ಸ್ಮಶಾನವೇ ಇಲ್ಲ. ವಯೋಸಹಜ ಕಾಯಿಲೆಯಿಂದ ರಂಗನಾಥ್ (75) ಎನ್ನುವವರು ಸಾವನ್ನಪ್ಪಿದ್ದು, ಆದರೆ, ಮೃತದೇಹ ಊಳಲು ಜಾಗವಿಲ್ಲದೆ ಗ್ರಾ.ಪಂ ಮುಂದೆ ಗ್ರಾಮಸ್ಥರು ಮೃತದೇಹವನ್ನಿಟ್ಟಿದ್ದಾರೆ.

ಸ್ಮಶಾನದ ಜಾಗವಿದೆ, ಉಳ್ಳವರು ಒತ್ತುವರಿ ಮಾಡಿ ತೋಟ ಮಾಡಿದ್ದಾರೆ. ಕಳೆದ 50 ವರ್ಷಗಳಿಂದಲೂ ಸ್ಮಶಾನವಿಲ್ಲದೆ ಇರುವ ಗ್ರಾಮವಾಗಿ ಇಲ್ಲಿನ ಜನರು ಕಷ್ಟಪಡುತ್ತಿದ್ದಾರೆ. ಇಷ್ಟು ವರ್ಷ ಸಾವನ್ನಪ್ಪಿದವರನ್ನ ಮನೆಯವರು ತಮ್ಮ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಮೃತ ರಂಗನಾಥ್ ಗ್ರಾಮಸ್ಥರೇ ಆದರೂ ಮನೆಯವರು ಇಲ್ಲ, ಸ್ವಂತ ಜಾಗವೂ ಇಲ್ಲ. ಹೀಗಾಗಿ ಗ್ರಾಮಸ್ಥರೇ ಅಂತ್ಯ ಸಂಸ್ಕಾರಕ್ಕೆ ಮುಂದಾದರೂ ಅಂತ್ಯ ಸಂಸ್ಕಾರ ನಡೆಸಲು ಜಾಗವಿಲ್ಲ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
ಹತ್ತಾರು ಬಾರಿ ಗ್ರಾಪಂ ಗಮನಕ್ಕೆ ತಂದರೂ ನೋ.. ಯೂಸ್. ಹೀಗಾಗಿ ಇಂದು ಮೃತದೇಹವನ್ನು ಪಂಚಾಯಿತಿ ಮುಂದಿಟ್ಟು ಪ್ರತಿಭಟನೆ ನಡೆಸಲಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.













