ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ದೇವಸ್ಥಾನದ ಹುಂಡಿ ಹಣವನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕಟ್ಟಿಹಕ್ಕಲು ಸಮೀಪ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಕಟ್ಟಿಹಕ್ಕಲು ಸಮೀಪದ ಹೊಸಕೆರೆ ಬಳಿಯ ದೇವಸ್ಥಾನವೊಂದರಲ್ಲಿ ಕಳ್ಳನೊಬ್ಬ ಕಳ್ಳತನ ಮಾಡಿ ಆ ಹಣದಲ್ಲಿ ಎಣ್ಣೆ ಖರೀದಿ ಮಾಡಲು ಬಾರ್ ಗೆ ತೆರಳಿದ್ದಾನೆ. ಬಾರ್ ನಲ್ಲಿ ಹಣ ನೀಡಿದಾಗ ನೋಟಿನಲ್ಲಿ ಕುಂಕುಮದ ಕಲೆ ಇರುವುದನ್ನು ಗಮನಿಸಿದ ಬಾರ್ ಮಾಲೀಕರು ಅನುಮಾನಗೊಂಡು ಕೂಡಲೇ ಆತನನ್ನು ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ.

ಕೂಡಲೇ ಪೊಲೀಸರಿಗೆ ಕರೆ ಮಾಡಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.














