ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಾವಿ ಸ್ವಚ್ಛಗೊಳಿಸುವ ವೇಳೆ ಆಮ್ಲಜನಕದ ಕೊರತೆಯಿಂದ ಉಸಿರಾಟದ ಸಮಸ್ಯೆ ತಲೆದೋರಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಉಂಡೇದಾಸರಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಮೋಹನ್ (40) ಮೃತ ದುರ್ದೈವಿ.
ಮೋಹನ್ ಅವರು ದರ್ಶನ್ ಎಂಬುವರ ಮನೆಯ ಬಾವಿ ಕ್ಲೀನ್ ಮಾಡಲು ಹೋಗಿದ್ದರು, ಬಾವಿಯೊಳಗೆ ಇಳಿದ ಸಂದರ್ಭ ಉಸಿರಾಟದ ಸಮಸ್ಯೆ ಉಂಟಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












