ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಒಂದೆರೆಡು ಅವಧಿಯಲ್ಲಿ ಮುನ್ನೆಲೆಗೆ ಬಂದು ಅಂತಿಮ ಸುತ್ತಿನ ಆಯ್ಕೆಯವರೆಗೆ ಸ್ಥಾನ ಪಡೆದು ರಾಜಕೀಯ ಮೇಲಾಟಗಳಿಂದ ರಾಜ್ಯೋತ್ಸವ ಪ್ರಶಸ್ತಿಯಿಂದ ವಂಚಿತರಾಗಿದ್ದ ಶೃಂಗೇರಿ ರಾಮಣ್ಣರಿಗೆ ಈ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರುವುದೇ? ಎಂದು ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ.
ಇದನ್ನೂ ಓದಿ; ಆಧಾರ್ ಕಾರ್ಡ್ ಕುರಿತು ಮುಖ್ಯ ಮಾಹಿತಿ; ಆಧಾರ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ

ಪ್ರಸಿದ್ಧ ಪುಣ್ಯ ಕ್ಷೇತ್ರ ಶೃಂಗೇರಿಯ ವಿದ್ಯಾದಿ ದೇವತೆ ನಾಡಿನ ಸಣ್ಣ ಹಳ್ಳಿಯ ನೆಮ್ಮಾರಿನಲ್ಲಿ ಶೃಂಗೇರಿ ರಾಮಣ್ಣ 1950ರ ಮಾ.28ರಂದು ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಮೇಲ್‌ನೆಮ್ಮಾರಿನಲ್ಲಿ ಪೂರೈಸಿದ ಇವರು ಪಟ್ಟಣದ ಸರ್ಕಾರಿ ಪ್ರೌಡಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಯನ್ನು ಪೂರ್ಣಗೊಳಿಸಿ ರಂಗ ಭೂಮಿ ಕಲಾವಿದರಾಗಿ ಹೊರಹೊಮ್ಮಿದವರು.
ಹಿರಿತೆರೆ, ಕಿರುತೆರೆ ಕಲಾವಿದರಾದ ಇವರು 6 ದಶಕಗಳ ಕಾಲ ರಂಗ ಭೂಮಿಯಲ್ಲಿ ಕಲಾಸೇವೆಯಲ್ಲಿ ದುಡಿದವರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಂಗ ರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಯನ್ನು ಮುಡಿಗೇರಿಸಿದ ಇವರಿಗೆ ಇದುವರೆಗೂ ರಾಜ್ಯದಿಂದ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಮಾತ್ರ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ.
ನಾಟಕ ರಂಗ ಭೂಮಿಯಲ್ಲಿ ಸೇವೆ ಸಲ್ಲಿಸಿದ್ದಲ್ಲದೆ ಡಾ. ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಕುಬಿ ಮತ್ತು ಇಯಾಲ, ದ್ವೀಪ, ಹಸೀನ, ನಾಯಿ ನೆರಳು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಗೃಹ ಬಂಗ ಮುಂತಾದ ಚಲನಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ವೈಶಾಲಿ ಕಾಸರವಳ್ಳಿ ನಿರ್ದೇಶನದ ಮೂಡಲ ಮನೆ ಧಾರವಾಹಿ, ಅಪೂರ್ವ ಕಾಸರವಳ್ಳಿಯವರ ಮದುಮಗಳು ಧಾರವಾಹಿ, ಅನನ್ಯ ಕಾಸರವಳ್ಳಿಯವರ ಹರಿಕಥಾ ಪ್ರಸಂಗ ಹಾಗೂ ಕಲ್ಲಿನ ಸೈತಾನ ಚಲನಚಿತ್ರಗಲ್ಲೂ ನಟಿಸಿದ್ದಾರೆ. ಕವಿತಾ ಲಂಕೇಶ್ ನಿರ್ದೇಶನದ ದೇವಿರಿ, ಅವ್ವ, ತನನಂ-ತನನಂ, ಬಿಂಬ, ಪ್ರೀತಿ- ಪ್ರೇಮ- ಪ್ರಣಯ, ಕರಿಯ ಕಣ್ಣು ಬಿಟ್ಟ ಮುಂತಾದ ಚಲನಚಿತ್ರದಲ್ಲೂ ನಟಿಸಿದ್ದಾರೆ. ಇದಲ್ಲದೆ ಶಿವ ರುಧ್ರಯ್ಯನವರ ನಿರ್ದೇಶನದ ಮಾಗಿಯ ಕಾಲ, ಬೆಳ್ಳಿ ಬೆಳಕು, ಮಾರಿಕೊಂಡವರು, ರಾಮನ ಸವಾರಿ, ಮೂಡಲ ಸೀಮೆಯಲ್ಲೂ ಮತ್ತು ಎಸ್ ಎಲ್ ಬೈರಪ್ಪನವರ ಗೃಹ ಭಂಗ, ನಾಯಿನೆರಳು, ಮತದಾನ ಈ ಮೂರೂ ಕಾದಂಬರಿಗಳ ಚಲನಚಿತ್ರ ಅವತರಿಣಿಕೆಯಲ್ಲಿ ನಟಿಸಿದ ಕೀರ್ತಿ ಇವರದ್ದಾಗಿದೆ.
ಇದನ್ನೂ ಓದಿ; ಬೋರ್ವೆಲ್ ಕೊರೆಸಲು ಸಿಗುತ್ತೆ ಸಹಾಯಧನ; ಈ ರೀತಿ ಅರ್ಜಿ ಸಲ್ಲಿಸಿ
ನಾಟಕ ಹಾಗೂ ಚಲನಚಿತ್ರಗಳಲ್ಲಿ ನಟಿಸಿದ ಶೃಂಗೇರಿ ರಾಮಣ್ಣನವರು ಕಂಠದಾನದಲ್ಲೂ ಮಿಂಚಿದವರು. ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರಿಗೆ ಪ್ರಜಾಶಕ್ತಿ ಚಲನಚಿತ್ರಕ್ಕೆ, ತೂಗುದೀಪ ಶ್ರೀನಿವಾಸ್ ರವರ ಸವ್ಯಸಾಚಿ, ಮಣಿಕಂಠನ ಮಹಿಮೆಯಲ್ಲಿ ನಂಬಿಯಾರ್ ರವರಿಗೆ, ಜೀವನದಿ ಚಲನಚಿತ್ರದಲ್ಲಿ ಆರ್ ಎನ್ ಜಯಗೋಪಾಲ್ ರವರಿಗೆ, ವೀರಬಾಹು ಚಿತ್ರದಲ್ಲಿ ನಟಿಸಿದ ನಿರ್ದೇಶಕ ಏ ಟಿ ರಘುರವರಿಗೂ ಕಂಠದಾನ ನೀಡಿದವರಾಗಿದ್ದಾರೆ.
ಇದನ್ನೂ ಓದಿ; ಬಿಗ್ ಬಾಸ್ ಕನ್ನಡ ಶೋಗೆ ಸಂಕಷ್ಟ; ಕೋರ್ಟ್ ನಿಂದ ತುರ್ತು ನೋಟಿಸ್ ಜಾರಿ; ಬಂದ್ ಆಗುತ್ತಾ ರಿಯಾಲಿಟಿ ಶೋ…?
2015ರಲ್ಲಿ ಶೃಂಗೇರಿಯಲ್ಲಿ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾ ಅಧ್ಯಕ್ಷರಾಗಿ ಗೌರವ ಪಡೆದವರಾಗಿದ್ದರು. ರಾಜ್ಯದ ಸುಮಾರು 15ಕ್ಕೂ ಹೆಚ್ಚು ನಾಟಕ ಸಂಸ್ಥೆಗಳಲ್ಲಿ ಕಲಾ ಸೇವೆ ಮಾಡುವುದರ ಮೂಲಕ ದುಡಿದವರಾಗಿದ್ದಾರೆ. ರಾಜ್ಯದ ವಿವಿಧ ಸಂಘ ಸಂಸ್ಥೆಗಳಿಂದ ಮಠ ಮಾನ್ಯಗಳಿಂದ ಸನ್ಮಾನದ ಶ್ರೀ ರಕ್ಷೆ ಪಡೆದವರಾಗಿದ್ದಾರೆ. ಆದರೆ ಇದವರೆಗೂ ಇವರಿಗೆ ರಾಜ್ಯದಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿ ಇವರ ಹೆಗಲಿಗೆ ಏರಲೇ ಇಲ್ಲ ಈ ಭಾರಿಯಾದರೂ ಸಿಗಬಹುದೇ ಎಂಬುದು ಕಾದುನೋಡಬೇಕಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?












