ಶೃಂಗೇರಿ: ಕಾಡಾನೆ ದಾಳಿಯಿಂದ ಮೃತಪಟ್ಟ ಹರೀಶ್ ಶೆಟ್ಟಿ ಅಳಿಯ 7 ವರ್ಷದ ಬಳಿಕ ಪತ್ತೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) 7 ವರ್ಷದ ಬಳಿಕ ಕಾಣೆಯಾಗಿದ್ದ ವ್ಯಕ್ತಿ ಇದೀಗ ಪೊಲೀಸರ ಪರಿಶ್ರಮದಿಂದ ಮನೆಗೆ ಮರಳಿ ಬಂದಿದ್ದಾರೆ.


ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!


2018ರ ಮೇ ನಲ್ಲಿ ಶೃಂಗೇರಿಯ ಕೆರೆ ಗ್ರಾಪಂ ವ್ಯಾಪ್ತಿಯ ಕೆರೆಗದ್ದೆ ಪ್ರೀತಿಕುಮಾರ್ ಕಾಣೆಯಾಗಿದ್ದಾನೆ ಎಂದು ತಾಯಿ ಜಯಮ್ಮ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರೀತಿಕುಮಾರ್‌ ಗಾಗಿ ಹುಡುಕಿದ್ದರೂ ಸುಳಿವು ಸಿಕ್ಕಿರಲಿಲ್ಲ. ಎಸ್ಪಿ ಡಾ. ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಂತೆ ಶೃಂಗೇರಿ ಪಿಎಸ್‌ಐ ಅಭಿಷೇಕ್ ನೇತೃತ್ವದಲ್ಲಿ ಎಎಸ್‌ ಐ ರಮೇಶ್‌, ಪೊಲೀಸ್ ಅಧಿಕಾರಿ ರಜಿತ್ ಅವರನ್ನು ಒಳಗೊಂಡ ತಂಡವನ್ನು ರಚಿಸಿ ಪ್ರಕರಣದ ಕುರಿತು ಹಲವು ನಗರಗಳ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು.

ಬಳಿಕ ಪ್ರೀತಿಕುಮಾರ್ ಮಹಾರಾಷ್ಟ್ರದ ಪುಣೆಯಲ್ಲಿ ಇರುವ ಕುರಿತು ಮಾಹಿತಿ ದೊರಕಿದ್ದು, ಅಲ್ಲಿರುವ ಸ್ಥಳೀಯರಾದ ಸಂಜೀವ್ ಶೆಟ್ಟಿ, ಲಕ್ಷ್ಮಣ್ ಸಹಕಾರದಿಂದ ಪ್ರೀತಿಕುಮಾ‌ರ್ ಅವರನ್ನು ಪತ್ತೆಹಚ್ಚಿ ಕೆರೆಗದ್ದೆಗೆ ಬುಧವಾರ ಕರೆತಂದು ತಾಯಿ ಜಯಮ್ಮ ಅವರ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ


ಕಾಡಾನೆ ದಾಳಿಯಿಂದ ಮೃತಪಟ್ಟ ಹರೀಶ್ ಶೆಟ್ಟಿ ಸೋದರಳಿಯ ಪ್ರೀತಿಕುಮಾರ್:
ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರೀತಿಕುಮಾ‌ರ್ ಬಳಿ ಮೊಬೈಲ್ ಇರಲಿಲ್ಲ. ಹೊಟ್ಟೆಪಾಡಿಗಾಗಿ ಹಲವು ಹೋಟೆಲ್‌ಗಳಲ್ಲಿ ದುಡಿಯುತ್ತಿದ್ದರು. ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟ ಹರೀಶ್ ಶೆಟ್ಟಿ ಅವರ ಸೋದರಳಿಯ ಪ್ರೀತಿಕುಮಾರ್. ಪತಿಯನ್ನು ಕಳೆದುಕೊಂಡ ತಾಯಿ ಜಯಮ್ಮ ಅವರು ತಮ್ಮ ಹರೀಶ್ ಶೆಟ್ಟಿ ಅವರ ಮನೆಯಲ್ಲಿ ಇದ್ದರು. ಇತ್ತೀಚೆಗೆ ಹರೀಶ್ ಶೆಟ್ಟಿ ಪೊಲೀಸ್ ಠಾಣೆಗೆ ಬಂದು ನನ್ನ ಸೋದರಳಿಯನ್ನು ಹುಡುಕಿಕೊಡಿ ಎಂದು ಅಧಿಕಾರಿಗಳಲ್ಲಿ ಮನವಿ ಕೂಡಾ ಮಾಡಿಕೊಂಡಿದ್ದರು. ಆದರೆ, ಸೋದರಳಿಯ ಏಳು ವರ್ಷದ ಬಳಿಕ ಮನೆಗೆ ಬಂದಾಗ ಮಾವ ಕಾಡಾನೆಗೆ ಬಲಿಯಾಗಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.