ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ನೆನೆಗುದ್ದಿಗೆ ಬಿದ್ದಿರುವ ಶೃಂಗೇರಿ – ಮಂಗಳೂರು ಸಂಪರ್ಕ ರಸ್ತೆಯಾದ, ತನಿಕೋಡು ಗೇಟ್ನಿಂದ ಎಸ್.ಕೆ. ಬಾರ್ಡರ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಮಸ್ಯೆಗಳನ್ನು ತುರ್ತು ಪರಿಹರಿಸಬೇಕೆಂದು ಉಡುಪಿ ಚಿಕ್ಕಮಗಳೂರು ನೂತನ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: ಪಿಯುಸಿ-ಐಟಿಐ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,200 ಸ್ಕಾಲರ್ ಶಿಪ್; ಈ ರೀತಿ ಸಿಂಪಲ್ ಆಗಿ ಅರ್ಜಿ ಸಲ್ಲಿಸಿ

ಮನವಿ ಸ್ವೀಕರಿಸಿ ಸ್ಪಂದಿಸಿದ ಸಚಿವ ನಿತಿನ್ ಗಡ್ಕರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಶೀಘ್ರ ಕ್ರಮ ವಹಿಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: SSLC & PUCಯಲ್ಲಿ 65% ಪಡೆದಿದ್ದರೆ ₹30,000 ಸ್ಕಾಲರ್ಶಿಪ್; ಆದರೆ ಈ ಷರತ್ತು ಅನ್ವಯ.!
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿದ್ದ ಐವರು ಆರೋಪಿಗಳ ಬಂಧನ
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಲಿಂಗದಹಳ್ಳಿ ಗ್ರಾಮದ ಕೆಲವು ಮನೆಗಳಲ್ಲಿ ನಡೆದಿದ್ದ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೇ 21, 22 ಮತ್ತು 23ರಂದು ಆರೋಪಿಗಳು ಲಿಂಗದಹಳ್ಳಿ ಗ್ರಾಮದ ಕೆಲವು ಮನೆಗಳ ಬೀಗ ಒಡೆದು ಚಿನ್ನಾಭರಣ ಕಳವು ಮಾಡಿದ್ದರು. ಕಳವು ಮಾಡಿದ್ದ 4.12 ಲಕ್ಷ ಬೆಲೆಯ 58 ಗ್ರಾಂ ಚಿನ್ನದ ಒಡವೆ ಮತ್ತು 61 ಗ್ರಾಂ ಬೆಳ್ಳಿ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಎಸ್ ಐ ನಯೀಮುಲ್ಲಾ ಖಾನ್, ಸಿಬ್ಬಂದಿ ಎಚ್.ಸಿ. ಗಿರೀಶ್, ಕಾನ್ಸ್ಟೆಬಲ್ ಇರ್ಫಾನುಲ್ಲಾ, ಈರಗೊಂಡ ಮಿಣಿಚಿ, ಹರೀಶ್ ಇದ್ದರು.
ಮದ್ಯದಂಗಡಿಯಲ್ಲಿ ಹಣ ಮತ್ತು ಸಿಸಿ ಟಿವಿ ಡಿವಿಆರ್ ಕಳವು ಮಾಡಿದ್ದ ಆರೋಪಿಗಳ ಬಂಧನ:
ಚಿಕ್ಕಮಗಳೂರು: ತಾಲೂಕಿನ ಮರ್ಲೆ ಗ್ರಾಮದಲ್ಲಿರುವ ಎಂ.ಎಸ್.ಐ.ಎಲ್ ಮದ್ಯದಂಗಡಿಯಲ್ಲಿ ಹಣ ಮತ್ತು ಸಿಸಿ ಟಿವಿ ಡಿವಿಆರ್ ಕಳವು ಮಾಡಿದ್ದ ಪ್ರಕರಣದಲ್ಲಿ ಮೂರು ಜನ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ರೋಲಿಂಗ್ ಷಟರ್ ಬೀಗ ಮುರಿದು, 7.41 ಲಕ್ಷ ಹಣ ಮತ್ತು ಸಿಸಿ ಟಿವಿ ಡಿವಿಆರ್ ಕಳವು ಮಾಡಿದ್ದ ಪ್ರಕರಣದಲ್ಲಿ ಪಿ.ಐ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ನೇತೃತ್ವದ ಪೊಲೀಸ್ ತಂಡ 3 ಜನ ಆರೋಪಿಗಳನ್ನು ಬಂಧಿಸಿ, 52 ಸಾವಿರ ನಗದು, ಮದ್ಯದ ಬಾಟಲಿಗಳು ಮತ್ತು ಕೃತ್ಯವೆಸಗಲು ಬಳಿಸಿದ್ದ ಉಪಕರಣ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಮದ್ಯದ ಅಂಗಡಿಗಳಲ್ಲಿ ಕಳವು ಮಾಡಿದ್ದು, ಓರ್ವ ಆರೋಪಿ ದೇವಾಲಯ ಮತ್ತು ಕುರಿ ಕಳವು ಪ್ರಕರಣದಲ್ಲೂ ಕೂಡ ಭಾಗಿಯಾಗಿದ್ದಾನೆ ಎನ್ನಲಾಗಿದೆ.












