ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿದ್ದ ಐವರು ಆರೋಪಿಗಳ ಬಂಧನ

ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಲಿಂಗದಹಳ್ಳಿ ಗ್ರಾಮದ ಕೆಲವು ಮನೆಗಳಲ್ಲಿ ನಡೆದಿದ್ದ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: SSLC & PUCಯಲ್ಲಿ 65% ಪಡೆದಿದ್ದರೆ ₹30,000 ಸ್ಕಾಲರ್ಶಿಪ್; ಆದರೆ ಈ ಷರತ್ತು ಅನ್ವಯ.!


ಮೇ 21, 22 ಮತ್ತು 23ರಂದು ಆರೋಪಿಗಳು ಲಿಂಗದಹಳ್ಳಿ ಗ್ರಾಮದ ಕೆಲವು ಮನೆಗಳ ಬೀಗ ಒಡೆದು ಚಿನ್ನಾಭರಣ ಕಳವು ಮಾಡಿದ್ದರು. ಕಳವು ಮಾಡಿದ್ದ 4.12 ಲಕ್ಷ ಬೆಲೆಯ 58 ಗ್ರಾಂ ಚಿನ್ನದ ಒಡವೆ ಮತ್ತು 61 ಗ್ರಾಂ ಬೆಳ್ಳಿ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಎಎಸ್ ಐ ನಯೀಮುಲ್ಲಾ ಖಾನ್, ಸಿಬ್ಬಂದಿ ಎಚ್.ಸಿ. ಗಿರೀಶ್, ಕಾನ್‌ಸ್ಟೆಬಲ್ ಇರ್ಫಾನುಲ್ಲಾ, ಈರಗೊಂಡ ಮಿಣಿಚಿ, ಹರೀಶ್ ಇದ್ದರು.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಸಿಗಲಿದೆ 50,000 ವರೆಗೆ ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಮದ್ಯದಂಗಡಿಯಲ್ಲಿ ಹಣ ಮತ್ತು ಸಿಸಿ ಟಿವಿ ಡಿವಿಆರ್ ಕಳವು ಮಾಡಿದ್ದ ಆರೋಪಿಗಳ ಬಂಧನ:

ಚಿಕ್ಕಮಗಳೂರು: ತಾಲೂಕಿನ ಮರ್ಲೆ ಗ್ರಾಮದಲ್ಲಿರುವ ಎಂ.ಎಸ್.ಐ.ಎಲ್ ಮದ್ಯದಂಗಡಿಯಲ್ಲಿ ಹಣ ಮತ್ತು ಸಿಸಿ ಟಿವಿ ಡಿವಿಆರ್ ಕಳವು ಮಾಡಿದ್ದ ಪ್ರಕರಣದಲ್ಲಿ ಮೂರು ಜನ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.


ಇದನ್ನೂ ಓದಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗ; 30,000 ವರೆಗೆ ಸಂಬಳ, ಈ ರೀತಿ ಅರ್ಜಿ ಸಲ್ಲಿಸಿ


ರೋಲಿಂಗ್ ಷಟರ್ ಬೀಗ ಮುರಿದು, 7.41 ಲಕ್ಷ ಹಣ ಮತ್ತು ಸಿಸಿ ಟಿವಿ ಡಿವಿಆರ್ ಕಳವು ಮಾಡಿದ್ದ ಪ್ರಕರಣದಲ್ಲಿ ಪಿ.ಐ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ನೇತೃತ್ವದ ಪೊಲೀಸ್ ತಂಡ 3 ಜನ ಆರೋಪಿಗಳನ್ನು ಬಂಧಿಸಿ, 52 ಸಾವಿರ ನಗದು, ಮದ್ಯದ ಬಾಟಲಿಗಳು ಮತ್ತು ಕೃತ್ಯವೆಸಗಲು ಬಳಿಸಿದ್ದ ಉಪಕರಣ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.


ಇದನ್ನೂ ಓದಿ: ಈ ಜಿಲ್ಲೆಯ ರೈತರಿಗೆ 85.76 ಕೋಟಿ ರೂ. ಬೆಳೆ ವಿಮೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ…


ಆರೋಪಿಗಳು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಮದ್ಯದ ಅಂಗಡಿಗಳಲ್ಲಿ ಕಳವು ಮಾಡಿದ್ದು, ಓರ್ವ ಆರೋಪಿ ದೇವಾಲಯ ಮತ್ತು ಕುರಿ ಕಳವು ಪ್ರಕರಣದಲ್ಲೂ ಕೂಡ ಭಾಗಿಯಾಗಿದ್ದಾನೆ ಎನ್ನಲಾಗಿದೆ.

ಶೃಂಗೇರಿ : ಬಿಜೆಪಿ ಮುಖಂಡನ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಟ್ವಿಸ್ಟ್

ಚಿಕ್ಕಮಗಳೂರು/ಶೃಂಗೇರಿ:(ನ್ಯೂಸ್ ಮಲ್ನಾಡ್ ವರದಿ) ಹಾಸನದಲ್ಲಿ ಲೈಂಗಿಕ ದೌರ್ಜನ್ಯದ ಕೇಸ್ ನಲ್ಲಿ MLC ಸೂರಜ್ ರೇವಣ್ಣ‌ ಬಂಧನದ ಬೆನ್ನಲೇ ಚಿಕ್ಕಮಗಳೂರಿನಲ್ಲಿ ಬಿಜೆಪಿ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು, ಇಬ್ಬರು ಅಪ್ರಾಪ್ತ ಯುವಕರು ವೀಡಿಯೋ ಮೂಲಕ ಶೃಂಗೇರಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಅವರು ನಮ್ಮನ್ನು ಲೈಂಗಿಕವಾಗಿ ಬಳಸಿಕೊಂಡು ಬೆದರಿಕೆ ಹಾಕಿರುವುದಾಗಿ ಹೇಳಿಕೆ ನೀಡಿದ್ದರು, ಈ ವೀಡಿಯೊವನ್ನು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯ ಶಬರೀಶ್ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದರು.

ಆ ನಂತರದಲ್ಲಿ ದೂರು ನೀಡಲು ಶೃಂಗೇರಿ ಪೊಲೀಸ್ ಠಾಣೆಗೆ ತೆರಳಿದ ಸಂದರ್ಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಬರೀಶ್ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.

ಸಲಿಂಗ ಕಾಮ ಪ್ರಕರಣಕ್ಕೆ ಟ್ವಿಸ್ಟ್

ಸಲಿಂಗಕಾಮಕ್ಕೆ ಅಪ್ರಾಪ್ತ ಬಾಲಕರನ್ನ ಬಳಸಿಕೊಂಡ ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಬಾಲಕರಿಗೆ ಅನ್ಯಾಯವಾಗಿದೆ ಎಂದು ಆರೋಪ ಮಾಡಿದ್ದ ಶಬರೀಶ್ ವಿರುದ್ಧವೇ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ .

ವೈಯಕ್ತಿಕ ದ್ವೇಷಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡುವಂತೆ ಬಾಲಕರಿಗೆ ಧಮ್ಕಿ ಹಾಕಿ ವೀಡಿಯೋ ಮಾಡಲಾಗಿದೆ ಎಂಬ ಆರೋಪದ ಮೇಲೆ ಶಬರೀಶ್ ವಿರುದ್ಧ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ.

ಗ್ರಾಮ ಪಂಚಾಯತಿ ಸದಸ್ಯ ಶಬರೀಶ್, ಸೂರ್ಯ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಶಬರೀಶ್ ನನ್ನು ಬಂಧನ ಮಾಡಿದ್ದು ಮತ್ತೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಿನ್ನೆ ತಡರಾತ್ರಿ ಶಬರೀಶ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

ಸೂರಜ್ ರೇವಣ್ಣ ಪ್ರಕರಣ ‌ಹೊರ ಬರುತ್ತಿದ್ದಂತೆ ಬಾಲಕರನ್ನ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಲಾಗಿದೆ, ಹರೀಶ್ ಶೆಟ್ಟಿ – ಶಬರೀಶ್ ನಡುವೆ ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಲಾಗಿದೆ ಎಂದು ಆರೋಪಗಳು ಕೇಳಿಬಂದಿವೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.