ಚಿಕ್ಕಮಗಳೂರಿನಲ್ಲಿ ವಾಹನ ಸವಾರರಿಗೆ ಬಿಗ್ ಶಾಕ್

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರು – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸಂಪೂರ್ಣ ಕಾಮಗಾರಿ ಮುಗಿಯದಿದ್ದರೂ ಇದೀಗ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ಹೌದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಲಿಂಗ್ಲಾಪುರ ಗೇಟ್ ಬಳಿ ಇರೋ ಟೋಲ್ ಸಂಗ್ರಹ ಮಾಡಲಾಗುತ್ತಿದ್ದು, 18-20 ಕಿ.ಮೀ. ಫಾಸ್ಟ್ ಟ್ಯಾಗ್ 86 ರೂ, ಫಾಸ್ಟ್ ಟ್ಯಾಗ್ ಇಲ್ಲದ ವಾಹನಕ್ಕೆ180 ವರೆಗೆ ಟೋಲ್ ವಸೂಲಿಗೆ ಮುಂದಾಗಿದ್ದಾರೆ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 6000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಇದಲ್ಲದೆ ಕೇವಲ 18-20 ಕಿ.ಮೀ. ವರೆಗೆ ಮಾತ್ರ ರಸ್ತೆ ಕಾಮಗಾರಿ ಪೂರ್ಣವಾಗಿದ್ದು, ಸಂಪೂರ್ಣ ಕಾಮಗಾರಿ ಮುಗಿಯದಿದ್ದರೂ ಸ್ಕೈಲಾರ್ಕ್ ಕಂಪನಿಗೆ (ಖಾಸಗಿ ಕಂಪನಿ) ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹಕ್ಕೆ ಟೆಂಡರ್ ನೀಡಿದ್ದಾರೆ.


ಇದನ್ನೂ ಓದಿ: ಪಿಯುಸಿ-ಐಟಿಐ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,200 ಸ್ಕಾಲರ್ ಶಿಪ್; ಈ ರೀತಿ ಸಿಂಪಲ್ ಆಗಿ ಅರ್ಜಿ ಸಲ್ಲಿಸಿ


ಸ್ಥಳೀಯರಿಗೂ ಯಾವುದೇ ರಿಯಾಯಿತಿ ನೀಡದ ಟೋಲ್ ಸಿಬ್ಬಂದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿರುದ್ಧ ಸ್ಥಳೀಯರು ಫುಲ್ ಗರಂ ಆಗಿದ್ದಾರೆ.


ಇದನ್ನೂ ಓದಿ: SSLC & PUCಯಲ್ಲಿ 65% ಪಡೆದಿದ್ದರೆ ₹30,000 ಸ್ಕಾಲರ್ಶಿಪ್; ಆದರೆ ಈ ಷರತ್ತು ಅನ್ವಯ.!


ಶೃಂಗೇರಿ: ಗಡ್ಕರಿ ಭೇಟಿಯಾದ ಕೋಟಾ : ತನಿಕೋಡು ರಸ್ತೆ ಅಗಲೀಕರಣ ಯೋಜನೆಗೆ ಸಿಗುತ್ತದೆಯೇ ಮರುಜೀವ?
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ನೆನೆಗುದ್ದಿಗೆ ಬಿದ್ದಿರುವ ಶೃಂಗೇರಿ – ಮಂಗಳೂರು ಸಂಪರ್ಕ ರಸ್ತೆಯಾದ, ತನಿಕೋಡು ಗೇಟ್‌ನಿಂದ ಎಸ್.ಕೆ. ಬಾರ್ಡರ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಮಸ್ಯೆಗಳನ್ನು ತುರ್ತು ಪರಿಹರಿಸಬೇಕೆಂದು ಉಡುಪಿ ಚಿಕ್ಕಮಗಳೂರು ನೂತನ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.

ಮನವಿ ಸ್ವೀಕರಿಸಿ ಸ್ಪಂದಿಸಿದ ಸಚಿವ ನಿತಿನ್ ಗಡ್ಕರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಶೀಘ್ರ ಕ್ರಮ ವಹಿಸುವಂತೆ ಆದೇಶಿಸಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.