ಮಂಥನ ಶೃಂಗೇರಿಯ ವತಿಯಿಂದ “ದೇವಾಲಯಗಳ ಸಂರಕ್ಷಣೆ ನಮ್ಮ ಮುಂದಿರುವ ಸವಾಲುಗಳು” ಎಂಬ ವಿಷಯದ ಕುರಿತು ಜಿ ಹಿಂದೂ ಸೇವಾ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀ ಸುರೇಶ್ ಅವರು ಉಪನ್ಯಾಸ ಕಾರ್ಯಕ್ರಮವನ್ನ ಮಂಗಳವಾರ ನೆರವೇರಿಸಿಕೊಟ್ಟರು.
ಇದನ್ನೂ ಓದಿ; ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಸ್ಥಾನ ನಮ್ಮ ಶ್ರದ್ಧಾ ಕೇಂದ್ರಗಳು, ಅಂದಿನಿಂದ ಇಂದಿನವರೆಗೂ ನಮ್ಮ ದೇವಸ್ಥಾನಗಳು ಪ್ರಮುಖವಾಗಿ 3 ಸವಾಲುಗಳನ್ನು ಎದುರಿಸುತ್ತಿವೆ. ಅದೇನೆಂದರೆ ಅನ್ಯ ಧರ್ಮಿಯರ ಆಕ್ರಮಣ, ಸರ್ಕಾರದ ಹಸ್ತಕ್ಷೇಪ ಮತ್ತು ಈಗಿನ ಪೀಳಿಗೆಗೆ ಕಡಿಮೆಯಾಗುತ್ತಿರುವ ಶ್ರದ್ಧೆ.
ಸಾವಿರಾರು ವರ್ಷಗಳಿಂದಲೂ ಕೂಡ ನಮ್ಮ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ನಡೆದುಕೊಂಡೆ ಬಂದಿದೆ. ದೇವಸ್ಥಾನದ ನಾಶದ ಮೂಲಕ ಹಿಂದುಗಳ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಸರ್ಕಾರ ನಿರಂತರವಾಗಿ ದೇವಾಲಯಗಳ ಬಗ್ಗೆ ಹಸ್ತಕ್ಷೇಪ ಮಾಡುವ ಮೂಲಕ ನಮ್ಮ ಕಾಣಿಕೆಯ ಹಣವನ್ನು ನಮ್ಮ ನಮ್ಮ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಆ ಮೂಲಕ ಸಾಮಾಜಿಕ ಕಾರ್ಯಕ್ಕೆ ಬಳಸಲು ಬಿಡದೆ ಬೇರೆ ಯಾವುದೋ ಕಾರ್ಯಕ್ಕೆ ಬಳಸುತ್ತಿದೆ. ಅಷ್ಟೆ ಅಲ್ಲದೆ ಈಗಿನ ಪೀಳಿಗೆ ನಮ್ಮ ಶ್ರದ್ದಾ ಕೇಂದ್ರಗಳ ಮೇಲೆ ಶ್ರದ್ಧೆ ಮತ್ತು ಭಕ್ತಿ ಕಡಿಮೆ ಆಗುತ್ತಿರುವುದು ಕೂಡ ಪ್ರಮುಖವಾದ ಸವಾಲು ಎಂದರು.
ಇದನ್ನೂ ಓದಿ; ಸ್ವಂತ ಕೃಷಿ ಭೂಮಿ ಹೊಂದಿರೋ ರೈತರಿಗೆ ಗುಡ್ ನ್ಯೂಸ್; ಸರ್ಕಾರದಿಂದ ಸಿಗುತ್ತೆ 25,000 ಹಣ! ಈಗಲೇ ಅರ್ಜಿ ಸಲ್ಲಿಸಿ
ನಿರಂತರ ಜಾಗೃತಿಯ ಮೂಲಕ ಈ ಎಲ್ಲಾ ಸವಾಲುಗಳನ್ನು ಎದುರಿಸಲು ಸಾಧ್ಯ, ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಇಲ್ಲದ ಭೇದಗಳು ಊರಿನ ಸಣ್ಣ ದೇವಸ್ಥಾನಗಳಲ್ಲಿ ಕಾಣುತ್ತೀವೆ. ಹಾಗಾಗಿ ಸಾಮರಸ್ಯದ ಮೂಲಕ ಕೂಡ ಈ ಸವಾಲುಗಳನ್ನು ಎದುರಿಸಬಹುದು. ಒಂದು ಕಾಲದಲ್ಲಿ ಶೈಕ್ಷಣಿಕ ಆರ್ಥಿಕ ಕೇಂದ್ರಗಳಾದ ನಮ್ಮ ದೇವಸ್ಥಾನಗಳು ಮುಂದೆಯೂ ಹಾಗೆಯೇ ಉಳಿಯಲು ನಮ್ಮ ಪಾತ್ರ ದೊಡ್ಡದು ಎಂದರು.

ಇದನ್ನೂ ಓದಿ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ?; ಹೆಸರು ನೋಂದಣಿಗೆ ಅವಕಾಶ
ಇತ್ತೀಚಿಗೆ ಪ್ರಾಣ ಪ್ರತಿಷ್ಠಾಪನೆಗೊಂಡ ಅಯೋಧ್ಯೆಯ ಶ್ರೀ ರಾಮಮಂದಿರ ಸಾವಿರಾರು ವರ್ಷಗಳು ಉಳಿಯಲು ಕೇವಲ engineering work ಮಾತ್ರ ಸಾಕಾಗುವುದಿಲ್ಲ ಬದಲಾಗಿ ನಾವು ನಾವಾಗಿ ಅಂದರೆ ಹಿಂದುಗಳಾಗಿ ಉಳಿದು ಈ ಎಲ್ಲಾ ಸವಾಲುಗಳನ್ನು ಎದುರಿಸಿದರೆ ಮಾತ್ರ ಉಳಿಸಿಕೊಳ್ಳಲು ಸಾಧ್ಯ ಎಂದರು.
ಇದನ್ನೂ ಓದಿ; ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ; ಎರಡು ತಿಂಗಳ ಹಣ ಬರದೇ ಇದ್ರೆ ತಕ್ಷಣ ಈ ಕೆಲಸ ಮಾಡಿ!
ಇನ್ನು ಈ ಕಾರ್ಯಕ್ರಮದಲ್ಲಿ ಶ್ರೀ ಮುರಳಿಕೃಷ್ಣ ಭಟ್ ವೈಕುಂಠಪುರ, ಅನೇಕ ದೇವಸ್ಥಾಗಳ ಧರ್ಮದರ್ಶಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಪುರೋಹಿತರು, ಕೃಷಿಕರಾದ ದಿವೀರ ಮಲ್ನಾಡ್, ಸಾಮಾಜಿಕ ಕಾರ್ಯಕರ್ತರಾದ ರಾಜಗೋಪಲ್ ಹಾಗೂ ಮಂಥನ ತಂಡದ ಅನಿರುದ್ಧ ಕೊರಡಕಲ್ಲು, ಅಭಿರಾಮ್, ಲೇಖಕಿ ಮತ್ತು ಆಯುರ್ವೇದ ವೈದ್ಯರಾದ ಡಾ. ಲಕ್ಷೀ ನರಸಿಂಹ ಪ್ರಸಾದ್, ಅಲೇಖಕಿ ಶುಭಶ್ರೀ ಭಟ್ ಇದ್ದರು.
ಆಲ್ದೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 90 ಗ್ರಾಂ ಚಿನ್ನದ ಉಂಗುರಗಳು ಸೀಜ್
ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಲೋಕಸಭೆ ಚುನಾವಣೆಗೆ 2024 ದಿನಾಂಕ ಘೋಷಣೆ ಹಿನ್ನೆಲೆ ಇಡೀ ದೇಶಾದ್ಯಂತ ನೀತೆ ಸಂಹಿತೆ ಜಾರಿಯಾಗಿದ್ದು, ಅಲ್ಲಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಿರುವ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ಆಲ್ದೂರಿನ ವಸ್ತಾರೆ ಜಂಕ್ಷನ್ ಬಳಿ ದಾಖಲೆ ಇಲ್ಲದೆ ಬಲೆನೋ ವಾಹನದಲ್ಲಿ ಸಾಗಿಸುತ್ತಿದ್ದ 90 ಗ್ರಾಂ ಮೌಲ್ಯದ 18 ಚಿನ್ನದ ಉಂಗುರಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿನ್ನದ ವ್ಯಾಪಾರಿ ಒಬ್ಬರು ಗಟ್ಟಿ ಖರೀದಿಸಿ ಅದರಿಂದ ಉಂಗುರಗಳನ್ನು ತಯಾರಿಸಿ ಉಡುಪಿಯ ಜ್ಯುವೆಲರಿ ಅಂಗಡಿ ಮಾಲೀಕರಿಗೆ ನೀಡಲು ತೆರಳುತ್ತಿದ್ದರು ಎನ್ನಲಾಗಿದ್ದು, ತಪಾಸಣೆ ನಡೆಸಿದ ಪೊಲೀಸರು ಚಿನ್ನದ ಉಂಗುರವನ್ನು ವಶಕ್ಕೆ ಪಡೆದಿದ್ದಾರೆ.












